ಕಿಂಜಲ್ ಪಟೇಲ್ ಅವರ ನಿರಂತರ ಪರಿಶ್ರಮ, ಆಟದ ಮೇಲಿನ ಸಮರ್ಪಣಾ ಭಾವ ಹಾಗೂ ಇತ್ತೀಚಿನ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಿ ಈ ಮಹತ್ವದ ಅವಕಾಶ ಲಭಿಸಿದೆ. ಸ್ಥಳೀಯ ಹಾಗೂ ಅಕಾಡೆಮಿ ಪರವಾಗಿ ಅಮೋಘ ಪ್ರದರ್ಶನ ನೀಡುತ್ತ ಬಂದಿರುವ ಅವರು, ಈಗ ರಾಜ್ಯ ಮಟ್ಟದ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ. ಕಿಂಜಲ್ ಆಯ್ಕೆಗೆ ತರಬೇತಿ ಸಂಸ್ಥೆ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯು ಹರ್ಷ ವ್ಯಕ್ತಪಡಿಸಿದೆ.