ನರೇಗಲ್​ನ ಗಾಯಾಳುಗಳನ್ನು ಭೇಟಿಯಾದ ಕಾಟವೆ naregal

naregal ಹುಬ್ಬಳ್ಳಿಯ ಕೆಎಂಸಿಆರ್​ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರೇಗಲ್ ಗ್ರಾಮದ ಗಾಯಾಳುಗಳನ್ನು ಭೇಟಿಯಾಗಿ, ಆರೋಗ್ಯ ವಿಚಾರಸಿದ ಬಿಜೆಪಿ ಮುಖಂಡ ವೆಂಕಟೇಶ ಕಾಟವೆ.
naregal ಹುಬ್ಬಳ್ಳಿಯ ಕೆಎಂಸಿಆರ್​ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರೇಗಲ್ ಗ್ರಾಮದ ಗಾಯಾಳುಗಳನ್ನು ಭೇಟಿಯಾಗಿ, ಆರೋಗ್ಯ ವಿಚಾರಸಿದ ಬಿಜೆಪಿ ಮುಖಂಡ ವೆಂಕಟೇಶ ಕಾಟವೆ.
Published on

ಪ್ರಮುಖ ಮುಖ್ಯಾಂಶಗಳು

  • ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮನವಿ
  • ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
  • ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು
ಹುಬ್ಬಳ್ಳಿ :
ಗಾಯಾಳುಗಳಾದ ಜಯಪ್ಪ ಕುರುಬರ, ಲೋಹಿತ ಕುರುಬರ ಹಾಗೂ ಶಿವರಾಜ ಕುರುಬರ ಅವರನ್ನು ಭೇಟಿಯಾದ ವೆಂಕಟೇಶ ಕಾಟವೆ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ವೈದ್ಯರನ್ನು ಭೇಟಿ ನೀಡಿ, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ನರೇಗಲ್​ನಲ್ಲಿ ನಡೆದಿರುವ ಈ ಹಲ್ಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಒತ್ತಡ ಅಥವಾ ಪಕ್ಷಪಾತಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾವೇರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಕುರುಬರ, ಜಿ.ಎಸ್. ಕುರುಬರ, ಶ್ರೀರಾಮ ಸೇನಾ ಕಾರ್ಯಕರ್ತ ವೆಂಕಟೇಶ ದಾಸರ, ಯಶೋಧಾ ತಾಂಬೆ, ವೀರಯ್ಯ ಸಾಲಿಮಠ, ಶಾಮ ಸುಂದರ, ಅಣ್ಣಪ್ಪ ದಿವಟಗಿ, ಸಚಿನ ಕಾಟವೆ, ಆನಂದ ಬಾಕಳೆ, ಸುನೀಲ ಕಾಟವೆ, ಸಚಿನ ಪೂಜಾರಿ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net