ರೇಣುಕಾಚಾರ್ಯ ಮಂದಿರದಲ್ಲಿ (kartikotsav) ಕಾರ್ತಿಕೋತ್ಸವ

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ವಿಶ್ವನಾಥ ಹಿರೇಗೌಡ್ರ, ಸಂಕಪ್ಪ ಕಮ್ಮಾರ, ಡಾ. ಎಸ್.ವಿ. ಹಿರೇಮಠ, ಎಂ.ಬಿ. ಪೂಜಾರ ಗೋಷ್ಠಿಯಲ್ಲಿದ್ದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ವಿಶ್ವನಾಥ ಹಿರೇಗೌಡ್ರ, ಸಂಕಪ್ಪ ಕಮ್ಮಾರ, ಡಾ. ಎಸ್.ವಿ. ಹಿರೇಮಠ, ಎಂ.ಬಿ. ಪೂಜಾರ ಗೋಷ್ಠಿಯಲ್ಲಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ
  • ದೀಪೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
  • ಮಹನೀಯರಿಗೆ ಗುರುರಕ್ಷೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ನೇತೃತ್ವವನ್ನು ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸುವರು ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡುವರು. ತಿರುಮಲಕೊಪ್ಪ ಧರ್ಮ ನಿವಾಸದ ದಾನಯ್ಯ ದೇವರು, ಶಾಸಕ ಎಂ.ಆರ್. ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಧಕರಿಗೆ ಸನ್ಮಾನ: ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸಮರ್ಥ ಉಮರ್ಜಿ, ಶ್ರೇಯಾ ರಪಾಟಿ, ಸುಮಿತ್ ರಾಶೀನಕರ, ನಾಗವೇಣಿ ರಾಯಚೂರು, ಶಿವಾನಂದ ಚೆನ್ನಪ್ಪಗೌಡರ ಹಾಗೂ ಸಿದ್ದರಾಜ ಹುಬ್ಬಳ್ಳಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಾಧಕರಾದ ಸಿದ್ದಾರ್ಥಗೌಡ ಪಾಟೀಲ, ಸುಚಿತ್ ಅಂಗಡಿ, ನಿಶ್ಚಿತ ಹುಲ್ಲೂರ ಅವರಿಗೆ ಸನ್ಮಾನಿಸಲಾಗುವುದು. ಮಹನೀಯರಿಗೆ ಗುರುರಕ್ಷೆ ನೀಡಲಾಗುವುದು ಎಂದು ಹೇಳಿದರು.
ಸೇವಾ ಸಂಘದ ಕಾರ್ಯದರ್ಶಿ ಸಂಕಪ್ಪ ಕಮ್ಮಾರ, ಖಜಾಂಚಿ ಡಾ. ಎಸ್.ವಿ. ಹಿರೇಮಠ, ಸಹಕಾರ್ಯದರ್ಶಿ ಎಂ.ಬಿ. ಪೂಜಾರ ಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net