kargil vijayotsava ದೇಶ ಸಂರಕ್ಷಿಸುವ ಸೈನಿಕರನ್ನು ಗೌರವಿಸಿ

 kargil vijayotsava ಹುಬ್ಬಳ್ಳಿಯ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭವನ್ನು ನಿಂಗಪ್ಪ ಸಿಂಗೋಟಿ ಉದ್ಘಾಟಿಸಿದರು.
kargil vijayotsava ಹುಬ್ಬಳ್ಳಿಯ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭವನ್ನು ನಿಂಗಪ್ಪ ಸಿಂಗೋಟಿ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ 27ನೇ ವಷರ್ದ ಕಾರ್ಗಿಲ್ ವಿಜಯೋತ್ಸವ kargil vijayotsava ಮತ್ತು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ನಿಂಗಪ್ಪ ಸಿಂಗೋಟಿ ಮಾತನಾಡಿ, ಮೊದಲು ಹೆತ್ತ ತಂದೆ-ತಾಯಿಯನ್ನು ಸ್ಮರಿಸಿ, ಅನ್ನ ಕೊಡುವ ರೈತರು ಹಾಗೂ ನಮ್ಮನ್ನು ಸಂರಕ್ಷಿಸುವ ಸೈನಿಕರನ್ನು ಗೌರವಿಸಬೇಕು ಎಂದರು.
ನಿವೃತ್ತ ಯೋಧ ರವಿಚಂದ್ರ ಬಾಳೆಹೊಸೂರು ಮಾತನಾಡಿ, ದೇಶಕ್ಕಾಗಿ ತಮ್ಮ ಜೀವವನ್ನು ಲೆಕ್ಕಿಸದೆ ಹೋರಾಡಿದ ಯೋಧರನ್ನು ಗೌರವದಿಂದ ಸ್ಮರಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಗುರುಮಾತೆ ಸುಪ್ರೀತಾ ಕುರಿ ಮಾತನಾಡಿದರು. ಜರ್ಮನ್ ಒಲಿಂಪಿಕ್‌ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಐಶ್ವರ್ಯ ಬಾಳೆಹೊಸೂರು ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net