ಹೊರನಾಡು ಕನ್ನಡಿಗರು ಮಾತೃಭಾಷೆ ಹೃದಯದಲ್ಲಿಟ್ಟುಕೊಂಡಿದ್ದಾರೆ

 ಅ.ಭಾ. ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳದಲ್ಲಿ ಸಾಧಕ ಹೊರನಾಡು ಕಮ್ನಡಿಗರನ್ನು ಸನ್ಮಾನಿಸಲಾಯಿತು.
ಅ.ಭಾ. ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳದಲ್ಲಿ ಸಾಧಕ ಹೊರನಾಡು ಕಮ್ನಡಿಗರನ್ನು ಸನ್ಮಾನಿಸಲಾಯಿತು.
Published on
ಧಾರವಾಡ: ಕನ್ನಡ ಮಾಧ್ಯಮದಲ್ಲಿ ಓದಬೇಕಾದ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಗಡಿನಾಡು-ಹೊರನಾಡು ಕನ್ನಡಿಗರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಬೇಕು, ಹೊರನಾಡಿನಲ್ಲಿ ಕನ್ನಡ ವೃದ್ಧಿಸಬೇಕೆಂಬ ಆಗ್ರಹ ನ್ಯಾಯವೇ?
ಇಂತಹದೊಂದು ಪ್ರಶ್ನೆ ಎದ್ದಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲಾಪುರದಲ್ಲಿ ಆಯೋಜಿಸಿರುವ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಽಗಳ 10ನೇ ಮಹಾಮೇಳದ `ಹೊರನಾಡು ಕನ್ನಡ ಕನ್ನಡಿಗರ ಸುಖ-ದುಃಖಗಳು' ಗೋಷ್ಠಿಯಲ್ಲಿ. ಭಾಷೆ, ಉದ್ಯೋಗ, ಶಿಕ್ಷಣ ಸೇರಿ ಅನೇಕ ಸವಾಲುಗಳನ್ನು ಎದುರಿಸಿಯೂ ಸಮರ್ಥವಾಗಿ ಬದುಕುತ್ತಿರುವ ಗಡಿನಾಡು ಹಾಗೂ ಹೊರನಾಡು ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ. ಆದರೆ, ಸ್ಥಳೀಯ ಭಾಷೆಯನ್ನು ವಿರೋಧಿಸಿ ಕನ್ನಡವನ್ನು ಎತ್ತಿ ಹಿಡಿಯಲು ತುಂಬ ತೊಂದರೆಗಳನ್ನು ಪಡುತ್ತಿದ್ದಾರೆ. ಅಂತಹ ತೊಂದರೆಗಳನ್ನು ಕರ್ನಾಟಕ ಸರ್ಕಾರ ಸರಿ ಪಡಿಸಬೇಕು ಎಂಬುದೇ ಹೊರನಾಡು ಕನ್ನಡ ಸಂಘಗಳ ಪ್ರತಿನಿಧಿಗಳು ಪ್ರತಿಪಾದನೆ ಮಾಡಿದರು.
ಆಂಧ್ರಪ್ರದೇಶದ ಅಧೋನಿಯ ಎಂ. ಓಂಕಾರ ಮಾತನಾಡಿ, ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕಗಳು ಬರುತ್ತಿಲ್ಲ. ಆತ್ಮಸಾಕ್ಷಿ ಕೊಲೆ ಮಾಡಿ ತೆಲಗು ಕಲಿಯಬೇಕಾದ ಸ್ಥಿತಿ ಇದೆ. ತೆಲಗು ಭಾಷೆಯ ಒತ್ತಡಕ್ಕೆ ಶರೀರ ಅಂಜಿದರೂ ಮನಸ್ಸು ಮಾತ್ರ ಕನ್ನಡ ಎನ್ನುತ್ತಿದೆ. ಇತ್ತ ಕನ್ನಡವೂ ಅಲ್ಲ, ತೆಲಗೂ ಅಲ್ಲದೇ ಶಿಕ್ಷಣ, ಉದ್ಯೋಗ ಸಿಗದಂತಾಗಿದೆ ಎಂದರು.
ಕೇರಳದ ಕಾಸರಗೋಡಿನ ರಾಧಾಕೃಷ್ಣ ಮಾತನಾಡಿ, ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನ ಬದ್ಧ ಸವಲತ್ತುಗಳು ಸಿಗುತ್ತಿಲ್ಲ. ಕನ್ನಡದ ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಮಲೆಯಾಳಿ ಅಽಕಾರನ್ನು ನೇಮಿಸಿ ಸವಲತ್ತು ದೊರೆಯದಂತೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಮಲೆಯಾಳ ಭಾಷಿಕರು ಕನ್ನಡಿಗರ ಅಸ್ತಿತ್ವ ಅಲುಗಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಭೆ, ಪಾಂಡಿತ್ಯ ಎಲ್ಲವೂ ಇದ್ದರೂ ಅನಿವಾರ್ಯವಾಗಿ ಇನ್ನೊಂದು ಭಾಷೆ ಅವಲಂಬಿಸುವ ದುರಂತ ನಮ್ಮದಾಗಿದೆ ಎಂದು ನೋವು ತೋಡಿಕೊಂಡರು.
ಕಾಸರಗೋಡಿನ ಮತ್ತೊಬ್ಬ ಕನ್ನಡಿಗ ಕೆ. ಗುರುಪ್ರಸಾದ ಮಾತನಾಡಿ, 2025ರಲ್ಲಿ ಮಲಯಾಳ ಭಾಷಾ ಮಸೂದೆ ಜಾರಿಗೊಳಿಸಿದ್ದು, ಈ ಮಸೂದೆಗೆ ತಿದ್ದುಪಡಿ ತರಬೇಕು. ಕಾಸರಗೋಡು ಸೇರಿದಂತೆ ಹೊರನಾಡಿನಲ್ಲಿ ರಂಗಭೂಮಿ, ಸಂಗೀತ, ಯಕ್ಷಗಾನ, ಸಾಹಿತಿಗಳಿದ್ದು, ಅಕಾಡೆಮಿಗಳಿಗೆ ಸದಸ್ಯರ ನೇಮಕ ಹಾಗೂ ಪ್ರಶಸ್ತಿಗಳಿಗೆ ನಮ್ಮನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಗೋವಾದ ಕನ್ನಡಗ ಪ್ರೊ.ಪ್ರಭುಲಿಂಗ ದಂಡಿನ ಮಾತನಾಡಿ, ಸೋಲಾಪುರ ಭಾಗದಿಂದ ವಾಸ್ಕೋಗೆ ಸಾಕಷ್ಟು ಕಾರ್ಮಿಕ ವರ್ಗ ಬರುತ್ತಿದ್ದು, ಕೂಡಲೇ ವಾಸ್ಕೋದಿಂದ ಸೋಲಾಪುರ ರೈಲು ಬಿಡಬೇಕು. ವಾಸ್ಕೋದಲ್ಲಿ ಕನ್ನಡ ಶಾಲೆ ಇದ್ದು, 150ರಿಂದ ಮಕ್ಕಳ ಸಂಖ್ಯೆ 20ಕ್ಕೆ ಇಳಿದಿದೆ. ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಕಾರವಾರದಲ್ಲಿರುವುದು. ಆದ್ದರಿಂದ ವಾಸ್ಕೋದಲ್ಲಿಯೇ ಎಸ್ಸೆಸ್ಸೆಲ್ಸಿ ಕೇಂದ್ರ ಸ್ಥಾಪಿಸಲು ಆಗ್ರಹಿಸಿದರು.
ಆಂಧ್ರಪ್ರದೇಶ ಜಿ. ದೊಡ್ಡಬಸಪ್ಪ ಮಾತನಾಡಿ, ಅಧೋನಿ, ಆಲೂರು, ರಾಯದುರ್ಗ, ಮಗಡಸೇರಾ ಆಂಧ್ರ ಸೇರಿಸಲು ಕನ್ನಡಿಗರೇ ಕಾರಣ. ಇಷ್ಟಾಗಿಯೂ ಕನ್ನಡವನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದೇವೆ. ಗಡಿನಾಡು-ಹೊರನಾಡು ವ್ಯಾಖ್ಯಾನ ತಪ್ಪಾಗಿದ್ದು, ಈ ವ್ಯಾಖ್ಯಾನ ಸರಿಪಡಿಸಲು ಆಗ್ರಹಿಸಿದರು.
ಮಹಾರಾಷ್ಟ್ರದ ಬಸವರಾಜ ಮಸೂತಿ, ಗಡಿನಾಡು-ಹೊರನಾಡು ಸಮಸ್ಯೆಗಳನ್ನು ಸೃಷ್ಟಿ ಮಾಡಿದ್ದೇ ಕರ್ನಾಟಕ ಸರ್ಕಾರ. ಪಿಯುಸಿ ಹಾಗೂ ನಂತರದ ತರಗತಿಗಳಿಗೆ ಕನ್ನಡದ ಪುಸ್ತಗಳು ಮಹಾರಾಷ್ಟçದಲ್ಲಿ ಸಿಗುತ್ತಿಲ್ಲ. ಮರಾಠಿಯಲ್ಲಿಯೇ ಕನ್ನಡ ಕಲಿಯುವಂತಾಗಿದೆ. ಗಡಿನಾಡು-ಹೊರನಾಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರಕ್ಕೆ ಮುಖ್ಯಮಂತ್ರಿಗಳ ಸಮ್ಮುಖ ಹಾಗೂ ಸಂಘದ ನಾಯಕತ್ವದಲ್ಲಿ ಪ್ರತ್ಯೇಕ ಸಭೆ ಕರೆಯಬೇಕು. ಅಲ್ಲಿ ಸಂಬAಽಸಿದ ಅಽಕಾರಿಗಳು ಇರಬೇಕು ಎಂದರು.
ಪ್ರತ್ಯೇಕ ಸಮಸ್ಯೆಗಳಿವೆ:
ತಮಿಳುನಾಡು ಮದ್ರಾಸ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ತಮಿಳು ಸೆಲ್ವಿ, ಎಲ್ಲ ರಾಜ್ಯಗಳ ಗಡಿ ಭಾಗಳಲ್ಲಿರುವ ಕನ್ನಡಿಗರ ಸಮಸ್ಯೆಗಳು ಭಿನ್ನವಾಗಿವೆ. ಆದ್ದರಿಂದ ಈ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿ, ಅವುಗಳಿಗೆ ಪರಿಹಾರ ಒದಗಿಸಬೇಕು. ಗಡಿ ಅಭಿವೃದ್ಧಿ ಪ್ರಾಽಕಾರ, ಕನ್ನಡ ಅಭಿವೃದ್ಧಿ ಪ್ರಾಽಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಭಿನ್ನವಾಗಿರುವ ಸಮಸ್ಯೆಗಳಿಗೆ `ಏಕ ರೀತಿಯ ನಿರ್ಣಯ' ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕೆಂದರು.
ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಧನವಂತ ಹಾಜಗೋಳ ಕಾರ್ಯಕ್ರಮ ಸಂಯೋಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net