ಮೊರಬದಲ್ಲಿ ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆ read

read ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳೊಂದಿಗೆ ಡಾ. ಲಿಂಗರಾಜ ರಾಮಾಪೂರ, ಸಿದ್ದಯ್ಯ ಹಿರೇಮಠ, ಭೀಮರಾಶಿ ಹೂಗಾರ, ನಾಗರತ್ನಾ ಕೆರಿಮನಿ ಹಾಗೂ ಇತರರಿದ್ದಾರೆ.
read ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳೊಂದಿಗೆ ಡಾ. ಲಿಂಗರಾಜ ರಾಮಾಪೂರ, ಸಿದ್ದಯ್ಯ ಹಿರೇಮಠ, ಭೀಮರಾಶಿ ಹೂಗಾರ, ನಾಗರತ್ನಾ ಕೆರಿಮನಿ ಹಾಗೂ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿಜೇತರಿಗೆ ಬಹುಮಾನ ವಿತರಣೆ
  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ದಿನಪತ್ರಿಕೆಗಳು ಆತ್ಮಸ್ಥೈರ್ಯ ತುಂಬುತ್ತವೆ
  • ದಿನಪತ್ರಿಕೆ ಓದುವ ಮಕ್ಕಳು ಜಾಣರಾಗುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿವಗಂಗಾ ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ನವಲಗುಂದ ತಾಲೂಕಿನ ಮೊರಬ ಗ್ರಾಮದ ಅಕ್ಕಮಹಾದೇವಿ ಹಂಚಿನಾಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ದಿನಪತ್ರಿಕೆ ಓದು ಜ್ಞಾನಾರ್ಜನೆ ಜತೆಗೆ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲಗಳನ್ನೂ ಬೆಳೆಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ದಿನಪತ್ರಿಕೆಗಳು ವಿದ್ಯಾರ್ಥಿ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ನವಲಗುಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ದಿನಪತ್ರಿಕೆ ಓದುವ ಮಕ್ಕಳು ಜಾಣರಾಗುತ್ತಾರೆ. ಅವರಿಗೆ ಜಗತ್ತಿನ ಜ್ಞಾನ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ದಿನಪತ್ರಿಕೆಗಳು ಆತ್ಮಸ್ಥೈರ್ಯ ತುಂಬುತ್ತವೆ ಎಂದರು.
ಮೊರಬ ಹೋಬಳಿ ಘಟಕ ಕಸಾಪ ಅಧ್ಯಕ್ಷ ಭೀಮರಾಶಿ ಹೂಗಾರ, ಗ್ರಾಮ ಘಟಕ ಅಧ್ಯಕ್ಷ ವಿ.ಎಸ್. ಶಿರಗುಪ್ಪಿ, ಮಾಜಿ ಅಧ್ಯಕ್ಷ ಎಸ್.ಎಂ. ಮೆಣಸಿನಕಾಯಿ ಪತ್ರಿಕೆಗಳ ಓದಿನ ಕುರಿತಾಗಿ ಮಾತನಾಡಿದರು.
ವಿವಿಧ ಶಾಲೆಗಳ ಎಸ್​ಡಿಎಂಸಿ ಅಧ್ಯಕ್ಷರಾದ ನಾಗರತ್ನಾ ಕೆರಿಮನಿ, ಹನುಮಂತ ಗರಗ, ಚಂದ್ರಶೇಖರ ಸಗರದ, ಸದಸ್ಯೆ ಜಗದೀಶ್ವರಿ ವಡೇಯರ ಹಾಗೂ ಇತರರಿದ್ದರು.
ಶಿಕ್ಷಕರಾದ ಎಚ್.ಎಸ್. ಚೆನ್ನಪ್ಪಗೌಡ್ರ, ಮಂಜುನಾಥ ಮನಮಿ, ಸವಿತಾ ಕಳಸಣ್ಣವರ, ಶರಣು ಕುರಿ, ಮಧುಮತಿ ಬಾಸುತ್ಕರ, ಶಾಂತಾ ಜಾಲಿಕಟ್ಟಿ ನಿರ್ಣಾಯಕರಾಗಿದ್ದರು.
ಮುಖ್ಯ ಗುರುಗಳಾದ ಲಿಂಗರಾಜ ಕಮತ ಸ್ವಾಗತಿಸಿದರು. ಸವಿತಾ ಕಳಸಣ್ಣವರ ನಿರೂಪಿಸಿದರು. ಮಹಾಂತೇಶ ಇಟಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net