`ಕಾಮಧೇನು' ಸಂಸ್ಥೆ ಉದ್ಘಾಟನೆ 21ರಂದು

ಕಿಶನ್ ರಾವ್ ಕುಲಕರ್ಣಿ
ಕಿಶನ್ ರಾವ್ ಕುಲಕರ್ಣಿ
Published on
ಧಾರವಾಡ: ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ರಾಘವೇಂದ್ರ ಮಠ ಸಭಾಭವನದ ಪುರಂದರ ಮಂಟಪದಲ್ಲಿ ಜೂ. 21ರಂದು ಸಂಜೆ 5 ಗಂಟೆಗೆ `ಕಾಮಧೇನು' ಸಂಸ್ಥೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶನ್ ರಾವ್ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಯರ್ ಜ್ಯೋತಿ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಮಧು ಜೋಶಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪುರಂದರ ಮಂಟಪದ ಕಾರ್ಯದರ್ಶಿ ಡಾ. ಸಿ. ನಾಗರಾಜ, ಸಂಸ್ಥೆಯ ಗೌರವಾಧ್ಯಕ್ಷ ಡಾ. ಕಲ್ಮೇಶ್ ಹಾವೇರಿಪೇಟ, ಕಲಾ ಸಂಗಮ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭು ಹಂಚಿನಾಳ, ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅತಿಥಿಯಾಗಿ ಆಗಮಿಸುವರು ಎಂದರು.
ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ರಂಗಭೂಮಿ, ಜನಪದ, ಸಾಂಸ್ಕೃತಿಕ ವೈವಿಧ್ಯ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಡಾ. ಅರವಿಂದ ಮುಳಗುಂದ, ಡಾ. ಕಲ್ಮೇಶ್ ಹಾವೇರಿಪೇಟ, ಆನಂದ ಜೋಶಿ, ಡಾ. ಪ್ರಭು ಹಂಚಿನಾಳ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net