kalashrunga award ಸಂಗೀತಕ್ಕೆ ಜೀವನ ಮುಡಿಪಾಗಿಟ್ಟ ಕಲಾವಿದರು

kalashrunga award ಹುಬ್ಬಳ್ಳಿಯಲ್ಲಿ ಭಾನುವಾರ ಶ್ರೀರಾಮ ಕಲಾ ವೇದಿಕೆ ವತಿಯಿಂದ ಕಲಾಶೃಂಗ ರಾಷ್ಟ್ರೀಯ ಪ್ರಶಸ್ತಿಯನ್ನು ಪಂ. ಗಣಪತಿ ಭಟ್​ ಹಾಸಣಗಿ ಅವರಿಗೆ ಪ್ರದಾನ ಮಾಡಲಾಯಿತು. ಪಂ. ಎಂ. ವೆಂಕಟೇಶಕುಮಾರ, ಪಂ. ರವೀಂದ್ರ ಯಾವಗಲ್​, ಕುಮಾರ ಬೆಕ್ಕೇರಿ, ಸ್ವಾಮಿ ವಿಜಯಾನಂದ ಮಹಾರಾಜ್​, ರವೀಂದ್ರ ದೇಸಾಯಿ ಇದ್ದರು.
kalashrunga award ಹುಬ್ಬಳ್ಳಿಯಲ್ಲಿ ಭಾನುವಾರ ಶ್ರೀರಾಮ ಕಲಾ ವೇದಿಕೆ ವತಿಯಿಂದ ಕಲಾಶೃಂಗ ರಾಷ್ಟ್ರೀಯ ಪ್ರಶಸ್ತಿಯನ್ನು ಪಂ. ಗಣಪತಿ ಭಟ್​ ಹಾಸಣಗಿ ಅವರಿಗೆ ಪ್ರದಾನ ಮಾಡಲಾಯಿತು. ಪಂ. ಎಂ. ವೆಂಕಟೇಶಕುಮಾರ, ಪಂ. ರವೀಂದ್ರ ಯಾವಗಲ್​, ಕುಮಾರ ಬೆಕ್ಕೇರಿ, ಸ್ವಾಮಿ ವಿಜಯಾನಂದ ಮಹಾರಾಜ್​, ರವೀಂದ್ರ ದೇಸಾಯಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಂ. ಗಣಪತಿ ಭಟ್​ ಹಾಸಣಗಿ ಅವರಿಗೆ ಕಲಾಶೃಂಗ ಪ್ರದಾನ
  • ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯ
ಹುಬ್ಬಳ್ಳಿ: kalashrunga award ಗುರು- ಶಿಷ್ಯ ಹಾಗೂ ಸಂಗೀತ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿ, ತಮ್ಮ ಇಡೀ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಾಗಿಟ್ಟ ಪಂ. ಗಣಪತಿ ಭಟ್​ ಹಾಸಣಗಿ ಅವರು ಯಾವುದೇ ಪ್ರಶಸ್ತಿ, ಸನ್ಮಾನಗಳನ್ನು ಕೇಳಿದವರಲ್ಲ, ಅನೇಕ ಗೌರವಗಳು ತಾವಾಗಿಯೇ ಅವರ ಮುಡಿಗೇರಿವೆ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು.
ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಶ್ರೀ ರಾಮ ಕಲಾ ವೇದಿಕೆ ವತಿಯಿಂದ ರಾಮಚಂದ್ರ ಯಾವಗಲ್​ ಅವರ ಸ್ಮರಣಾರ್ಥ ಭಾನುವಾರ ಏರ್ಪಡಿಸಿದ್ದ ನಾದ ನಮನ ವಾರ್ಷಿಕ ಸಂಗೀತೋತ್ಸವದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಅತ್ಯಂತ ಸ್ವಾಭಿಮಾನದಿಂದ ಬದುಕು ನಡೆಸಿದ ಅವರು, ಸಂಗೀತಕ್ಕೆ ಕೊಟ್ಟ ಕೊಡುಗೆ ಅಪಾರ. ಅವರಿಗೆ ಇಷ್ಟೊತ್ತಿಗಾಗಲೇ ಪದ್ಮಭೂಷಣ ಪ್ರಶಸ್ತಿ ಸಿಗಬೇಕಾಗಿತ್ತು. ಅವರು ಎಲ್ಲಿಯೂ ಕೇಳಿ ಪಡೆದವರಲ್ಲ. ಅವರದು ದೊಡ್ಡ ಮನಸ್ಸು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಿಂದ ಕಲಾಶೃಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ. ಗಣಪತಿ ಭಟ್​ ಹಾಸಣಗಿ ಅವರು, ಸಂಗೀತವನ್ನು ಸಾಗರಕ್ಕೆ ಹೋಲಿಸಲಾಗುತ್ತದೆ. ಅದರಲ್ಲಿ ನಾನು ಆಕಸ್ಮಿಕವಾಗಿ ಬಿದ್ದವನು. ಗೊತ್ತು, ಗುರಿ ಯಾವುದೂ ಇರಲಿಲ್ಲ. ನೀರಲ್ಲಿ ಬಿದ್ದ ಮೇಲೆ ಈಜುವುದೊಂದೇ ನನ್ನ ಕೆಲಸ, ಅದನ್ನು ಮಾಡುತ್ತ ಬಂದಿರುವೆ ಎಂದರು.
ಧಾರವಾಡದಲ್ಲಿ ಇದ್ದಾಗ ಪಂ. ಬಸವರಾಜ ರಾಜಗುರು ಅವರ ಸಂಪರ್ಕಕ್ಕೆ ಬಂದ ನಂತರ ಅವರ ಶಿಷ್ಯತ್ವ ಪಡೆದೆ. ಮುಂದೆ ಸಂಗೀತ ಲೋಕದಲ್ಲಿ ಗುರುತಿಸಿಕೊಳ್ಳುವಂತಾಯಿತು. ರಾಜಗುರು ಅವರಂತಹ ದೊಡ್ಡ ಗುರುಗಳ ಬಳಿ ಸಂಗೀತ ಕಲಿತಿದ್ದು ನನ್ನ ಪುಣ್ಯ ಎಂದು ತಮ್ಮ ಸಂಗೀತ ಪಯಣ ವಿವರಿಸಿದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವಿಜಯಾನಂದ ಮಹಾರಾಜ್​ ಮಾತನಾಡಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮಾರುತಿ ಹುಟಗಿ, ರವಿ, ವೀಣಾ ಹಾನಗಲ್​, ಶಶಿ ಸಾಲಿ, ಅರುಣ ದೇಸಾಯಿ, ವಿಷ್ಣು ಕಟ್ಟೆನವರ ಇತರರು ಇದ್ದರು.
ಪಂ. ಗಣಪತಿ ಭಟ್​ ಹಾಸಣಗಿ ಅವರಿಂದ ಸಂಗೀತ ಕಚೇರಿ ನಡೆಯಿತು. ಇವರಿಗೆ ಪಂ. ಶ್ರೀಪಾದ ಹೆಗಡೆ ಸಹಯೋಗ ನೀಡಿದರು. ಅಜಯ ಹೆಗ್ಡೆ ಹಾಮೋರ್ನಿಯಂ, ಗೋಪಾಲಕೃಷ್ಣ ಹೆಗ್ಡೆ ತಬಲಾ, ವಿನಾಯಕ ಹೆಗ್ಡೆ ವಯೋಲಿನ್​ ಸಾಥ್​ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net