jss students ಗೋಶಾಲೆಯಲ್ಲಿ ವಿದ್ಯಾರ್ಥಿಗಳ ವಿನೂತನ ಅನುಭವ

jss students ಹುಬ್ಬಳ್ಳಿಯ ಗೋಕುಲ ಬಳಿ ಇರುವ ಅಮೃತಾ ಗೋಶಾಲೆಗೆ ಭೇಟಿ ನೀಡಿದ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳು.
jss students ಹುಬ್ಬಳ್ಳಿಯ ಗೋಕುಲ ಬಳಿ ಇರುವ ಅಮೃತಾ ಗೋಶಾಲೆಗೆ ಭೇಟಿ ನೀಡಿದ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳು.
Published on
ಹುಬ್ಬಳ್ಳಿ: jss students ಗೋಸೇವೆ, ಪರಿಸರ ಸಂರಕ್ಷಣೆ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಶಾಲೆಯ ವಿದ್ಯಾರ್ಥಿಗಳಿಗೆ ಗೋಶಾಲೆ ದರ್ಶನ ಮಾಡಿಸಲಾಯಿತು.
ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗೋಕುಲ ಗ್ರಾಮದ ಅಮೃತಾ ಗೋಶಾಲೆಗೆ ಭೇಟಿ ನೀಡಿದರು.
ಅಮೃತಾ ಗೋಶಾಲೆಯ ಸಂಸ್ಥಾಪಕ ಪ್ರಭು ಚವ್ಹಾಣ ಅವರು, ಕಳೆದ 8 ವರ್ಷಗಳಿಂದ ಗೋಶಾಲೆ ನಡೆಸುತ್ತಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ದೇಶಿ ಗೋವುಗಳ ಮಹತ್ವ, ಅವುಗಳ ಆರೈಕೆ, ಗೋಮೂತ್ರ ಹಾಗೂ ಗೋಮಯದ ವಿವಿಧ ಉಪಯೋಗಗಳು, ಸಾವಯವ ಕೃಷಿಯಲ್ಲಿ ಗೋ ಉತ್ಪನ್ನಗಳ ಪಾತ್ರ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜಾನುವಾರುಗಳ ಕೊಡುಗೆಗಳನ್ನು ವಿವರಿಸಿದರು.
ವಿದ್ಯಾರ್ಥಿಗಳು ಗೋಶಾಲೆಯ ಕಾರ್ಯಚಟುವಟಿಕೆಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. ಪ್ರಶ್ನೆಗಳನ್ನು ಕೇಳಿ ತಮ್ಮ ಕುತೂಹಲ ತಣಿಸಿಕೊಂಡರು.
ಶಿಕ್ಷಕರು ಸಹ ಇಂತಹ ಶೈಕ್ಷಣಿಕ ಭೇಟಿಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಪರಿಸರ ಜಾಗೃತಿ ಹಾಗೂ ಭಾರತೀಯ ಮೌಲ್ಯಗಳ ಬಗ್ಗೆ ಗೌರವವನ್ನು ಬೆಳೆಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಇಂತಹ ಗೋಶಾಲೆಗೆ ಭೇಟಿ ನೀಡುವ ಮೂಲಕ ಭಾರತೀಯ ಜೀವನಶೈಲಿ ಬಗ್ಗೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net