sports ಉಣಕಲ್ಲ ಜೆಎಸ್​ಎಸ್​ ವಿದ್ಯಾರ್ಥಿಗಳ ಸಾಧನೆ

sports ಹುಬ್ಬಳ್ಳಿಯ ಉಣಕಲ್ಲ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಅಜಿತ ಪ್ರಸಾದ್​ ಹಾಗೂ ಆಡಳಿತ ಮಂಡಳಿಯ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ, ರಜನಿ ಪಾಟೀಲ, ಪ್ರವಿಣಕುಮಾರ, ಸಿದ್ದೇಶ್ವರ ಚಿಕ್ಕಮಠ ಇತರರು ಅಭಿನಂದಿಸಿದರು.
sports ಹುಬ್ಬಳ್ಳಿಯ ಉಣಕಲ್ಲ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಅಜಿತ ಪ್ರಸಾದ್​ ಹಾಗೂ ಆಡಳಿತ ಮಂಡಳಿಯ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ, ರಜನಿ ಪಾಟೀಲ, ಪ್ರವಿಣಕುಮಾರ, ಸಿದ್ದೇಶ್ವರ ಚಿಕ್ಕಮಠ ಇತರರು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ
  • ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕಂಚಿನ ಪದಕ
  • ಸಿಬಿಎಸ್​ಇ ಕ್ರೀಡಾಕೂಟದಲ್ಲಿ ಶಾಲೆ ತಂಡ ರನ್ನರ್​ ಅಪ್​
ಹುಬ್ಬಳ್ಳಿ: sports ಇಲ್ಲಿಯ ಉಣಕಲ್ಲ ಜೆಎಸ್​ಎಸ್​ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳು ವಿವಿಧ ಕಡೆಗಳಲ್ಲಿ ಆಯೋಜಿಸಿದ್ದ ಕ್ರೀಡಾಕೂಟಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಪ್ರೀತಿ ಸುಧಾಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಏರ್ಪಡಿಸಿದ್ದ ಸಿಬಿಎಸ್​ಇ ವಲಯ ಮಟ್ಟದ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಶಾಲೆಯ ವಿದ್ಯಾರ್ಥಿ ಆರುಷ್​ ಹತ್ತಿಕಾಳ ಚಿನ್ನದ ಪದಕ ಪಡೆದಿದ್ದಾನೆ. ನೊಯ್ಡಾದ ಆಸ್ಟರ್​ ಪಬ್ಲಿಕ್​ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾನೆ.
ವಲಯ ಮಟ್ಟದ ಕ್ರಿಕೆಟ್​ ಪಂದ್ಯಾವಳಿಯಲ್ಲಿ 9ನೇ ತರಗತಿಯ ನೀರಜ್​ ಮೆಣಸಿನಕಾಯಿ ಕಂಚಿನ ಪದಕ ಜಯಿಸಿದ್ದಾನೆ.

ಕ್ಲಸ್ಟರ್​ ಅಥ್ಲೆಟಿಕ್ಸ್​:

ಸಹೋದಯ ಎಚ್​ಡಿಎನ್​ಕೆಎಸ್​ ಅಥ್ಲೆಟಿಕ್ಸ್​:

8ನೇ ತರಗತಿಯ ಕೆ. ಯುತಿಕಾ ಯೋಗಿ 600 ಮೀಟರ್​ ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ. ರಿಲೇ ಸ್ಪರ್ಧೆಯಲ್ಲಿ ಶಾಲೆಯ ಅಜಿತ್​ ಹಿರೇಮಠ, ಅಕುಲ್​ ಅರಗೋಲ, ಅಭಿನವ ಮೊರಬ ಹಾಗೂ ಕ್ರಿಯಾನ್​ ಜೈನ್​ ದ್ವೀತಿಯ ಸ್ಥಾನ ಪಡೆದಿದ್ದಾರೆ.
ಹಾವೇರಿಯ ಕೆಎಲ್​ಇ ಸಿಬಿಎಸ್​ಇ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ತಂಡವು ರನ್ನರ್​ ಅಪ್​ ಪ್ರಶಸ್ತಿ ಬಾಚಿಗೊಂಡಿದೆ.
ಗದಗ ಜಿಲ್ಲೆ ಹುಲಕೋಟಿಯಲ್ಲಿ ಏರ್ಪಡಿಸಿದ್ದ ಸಹೋದಯ ಅಥ್ಲೆಟಿಕ್ಸ್​ 17 ವಯೋಮಿತಿಯ ಕ್ರೀಡಾಕೂಟದಲ್ಲಿ 8ನೇ ತರಗತಿಯ ವೈಷ್ಣವಿ ಕಶ್ಯಪ್​ 400 ಮತ್ತು 800 ಮೀಟರ್​ ಓಟ ಸ್ಪರ್ಧೆಯಲ್ಲಿ ದ್ವೀತಿಯ, 10ನೇ ತರಗತಿಯ ಯುವರಾಜ ಗೌರಿ 400 ಮತ್ತು 800 ಮೀಟರ್​ ಓಟದಲ್ಲಿ ದ್ವೀತಿಯ ಸ್ಥಾನ.
ಮಿಶ್ರ ರಿಲೇ ಸ್ಪರ್ಧೆಯಲ್ಲಿ ಓಮರ್​ ಕೆಯಾನ್​, ಯುವರಾಜ ಗೌರಿ, ಅನ್ವಿತಾ ಬೇಲಂಕರ್​ ಮತ್ತು ವೈಷ್ಣವಿ ಕಶ್ಯಪ್​ ತೃತೀಯ ಸ್ಥಾನ ಪಡೆದಿದ್ದಾರೆ.
ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಅಜಿತ ಪ್ರಸಾದ್​, ಆಡಳಿತ ಅಧಿಕಾರಿ ಅರಿಹಂತ ಪ್ರಸಾದ, ಜೆಎಸ್​ಎಸ್​ ಐಟಿಐ ಕಾಲೇಜಿನ ಪ್ರಾಂಶುಪಾಲ ಮಹಾವೀರ ಉಪಾದ್ಯೆ, ಪ್ರಾಚಾರ್ಯ ರಜನಿ ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಪ್ರವಿಣಕುಮಾರ, ಸಿದ್ದೇಶ್ವರ ಚಿಕ್ಕಮಠ, ಪಾಲಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net