ಧಾರವಾಡ: ನಗರದ ಸವದತ್ತಿ ರಸ್ತೆಯ ಮುರುಘಾಮಠದ ಬಳಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾಥಿರ್ಗಳು ದ್ವೀತಿಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಭಾರತಿ ಚಂದ್ರಶೇಖರ ಬಾಳಗಿ ಶೇ. 96.67 ಅಂಕ, ಅನು ರಾಜು ಜಾಧವ ಶೇ. 96.50 ಮತ್ತು ಗೌರಿ ಕೊಲ್ಲಾಪುರ ಶೇ. 88.83 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ರಂಗನಾಥ ಸಂಗಪ್ಪ ಬೆನಕಟ್ಟಿ ಶೇ. 87.33 ಅಂಕ, ಶಿವುಕುಮಾರ ಬಸವರಾಜ ಯಲಿಗಾರ ಶೇ. 85.50, ಭರತಕುಮಾರ ದೇವರಾಜ ಸನದಿ ಶೇ. 83.33 ಅಂಕ ಪಡೆದಿದ್ದಾನೆ.