ಜೆಎಸ್​ಎಸ್​ ಹುಕ್ಕೇರಿಕರ ಕಾಲೇಜು ವಿದ್ಯಾರ್ಥಿಗಳ ಸಾಧನೆ

JOISH ACHUT
JOISH ACHUT
Published on
ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಆರ್.ಎಸ್. ಹುಕ್ಕೇರಿಕರ ಕಾಲೇಜು ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಅಡ್ವಾನ್ಸ್ ್ಡ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಜೋಯಿಶ್ ಅಚ್ಯುತ್ (99.069 ಪಸೆಂಟೈಲ್), ಗರಪತಿ ಸಾಯಿ ವೈಭವ (94.36), ಸ್ವರೂಪ ಧರ್ಮಗೌಡರ (93.445), ಕೊಷ್ಟಿ ಅರ್ಥ್ ಧಾನೇಶಕುಮಾರ (93.128), ಹರೀಶ ಟಿ. (92.934), ಶ್ರೀಧರ ಕಲಾಲ (92.115), ಸಮೃದ್ಧಿ ಎಸ್. ಛಬ್ಬಿ (92.038), ಶಶಾಂಕ ಕದಕೊಳ್ಳಮಠ 91.48 ಅಂಕ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತಪ್ರಸಾದ, ಪ್ರಾಚಾರ್ಯೆ ಭಾರತಿ ಶಾನಭಾಗ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net