Jss event ಜೆಎಸ್ ಎಸ್ ಸ್ಕೂಲ್ ನಲ್ಲಿ ಅಕ್ಷರಭ್ಯಾಸ ಸಂಭ್ರಮ
Jss event ಹುಬ್ಬಳ್ಳಿಯ ಜೆಎಸ್ ಎಸ್ ಸ್ಕೂಲ್ ನಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಸರಸ್ವತಿ ಪೂಜೆ ನೆರವೇರಿಸಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಲಕರಿಂದಲೇ ಮೊದಲ ಅಕ್ಷರ ಬಿತ್ತನೆ
ವಿನೂತನ ಕಾರ್ಯಕ್ಕೆ ಪಾಲಕರ ಮೆಚ್ಚುಗೆ
ಮಕ್ಕಳ ಶಿಕ್ಷಣ ಪಯಣಕ್ಕೆ ಮುನ್ನುಡಿ
ಹುಬ್ಬಳ್ಳಿ: Jss event ಇಲ್ಲಿಯ ಉಣಕಲ್ಲದಲ್ಲಿರುವ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಅರ್ಥಪೂರ್ಣ ಹಾಗೂ ಸಂಭ್ರಮದ ವಾತಾವರಣದಲ್ಲಿ 'ಅಕ್ಷರಾಭ್ಯಾಸ ಕಾರ್ಯಕ್ರಮ'ವನ್ನು ಹಮ್ಮಿಕೊಳ್ಳಲಾಯಿತು.
ಎಲ್ಲೆಡೆ ಅಕ್ಷರಾಭ್ಯಾಸ ಸಂಭ್ರಮ ಮೂಡಿತ್ತು. ಪುಟಾಣಿಗಳ ಶಿಕ್ಷಣ ಪಯಣವು ಶುಭಾರಂಭಗೊಂಡಿತು.
ಪ್ರಾಚಾರ್ಯರಾದ ಪ್ರೇರಣಾ ಪಾತ್ರ ಹಾಗೂ ಸಹ ಸಂಯೋಜಕರಾದ ಯಶಸ್ವಿನಿ ನಾಯಕ್ ಉಪಸ್ಥಿತರಿದ್ದು, ಪುಟಾಣಿಗಳ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆಗೆ ಶುಭ ಹಾರೈಸಿದರು.
ಅವರು ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುವುದರೊಂದಿಗೆ, ಅಕ್ಷರಜ್ಞಾನದ ಮೂಲಕ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬ ಸಂದೇಶವನ್ನು ನೀಡಿದರು.
ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿಶೇಷವಾಗಿ ಪಾಲಕರು ತಮ್ಮ ಮಕ್ಕಳ ಕೈ ಹಿಡಿದು ಮೊದಲ ಅಕ್ಷರ ಬರೆಯಿಸುವ ಮೂಲಕ ಅವರ ಶಿಕ್ಷಣ ಪಯಣಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ಮಕ್ಕಳ ಮುಖದಲ್ಲಿ ಮೂಡಿದ ಉತ್ಸಾಹ, ಸಂತೋಷ ಹಾಗೂ ಕುತೂಹಲ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಅಕ್ಷರಾಭ್ಯಾಸದಲ್ಲಿ ಪಾಲಕರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಶಾಲಾ ಆವರಣವು ಹಬ್ಬದ ಸಂಭ್ರಮದಲ್ಲಿ ತೇಲುವಂತೆ ಮಾಡಿದರು.
ಈ ಅಕ್ಷರಾಭ್ಯಾಸ ಕಾರ್ಯಕ್ರಮವು ಮಕ್ಕಳ ಶಿಕ್ಷಣ ಜೀವನದ ಸ್ಮರಣೀಯ ಕ್ಷಣವಾಗಿ ಉಳಿಯುವಂತಾಯಿತು.