(journalist) ಎಐ ತಂತ್ರಜ್ಞಾದಿಂದ ಮಾಧ್ಯಮಕ್ಕೆ ಸಂಕಷ್ಟ

ಹುಬ್ಬಳ್ಳಿಯ ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು (journalist) ಅಧಿಕಾರ ಸ್ವೀಕರಿಸಿದರು.
ಹುಬ್ಬಳ್ಳಿಯ ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು (journalist) ಅಧಿಕಾರ ಸ್ವೀಕರಿಸಿದರು.
Published on
ಹುಬ್ಬಳ್ಳಿ: ಆರ್ಟಿಫಿಸಿಯಲ್ ಇಂಟೆಲಿಜೆನ್ಸಿ (ಎಐ) ತಂತ್ರಜ್ಞಾನವು ಮಾಧ್ಯಮವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂಬ ಆತಂಕ ಶುರುವಾಗಿದೆ. ಮಾಧ್ಯಮದವರೆಲ್ಲರೂ (journalist) ಬಿಕ್ಕಟ್ಟಿನ ದಿನಗಳಲ್ಲಿ ಇದ್ದೇವೆ ಎಂದು ವಡ್ಡರ್ಸೆ ರಘುರಾಮಶೆಟ್ಟಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.
ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ವೃತ್ತಿ ಬದಲಾಗಿದೆ. ಸದ್ಯ ಆಸಕ್ತಿ ವಾತಾವರಣ ಇಲ್ಲ. ಸತ್ಯ ಹೇಳುವುದು ಕ್ರಾಂತಿಕಾರಕ ಕೆಲಸ. ಸುಳ್ಳು ಹೇಳುವಾಗ ಸುಮ್ಮನಿರಬಾರದು. ಮಧ್ಯಮ ರಂಗವು ತನ್ನ ಮಗ್ಗಲು ಬದಲಿಸಿದೆ. ಬರೀ ಸುದ್ದಿ ಬರೆಯುವ ದಿನಗಳು ಹೋಗಿ, ಆರ್ಥಿಕ ಸಹಿತ ಎಲ್ಲ ರೀತಿಯ ಕೆಲಸಗಳನ್ನು ಸಂಪಾದಕರಾದವರು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತನಿಖಾ ವರದಿ ಬಚ್ಚಿಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಡಿ.ವಿ. ಗುಂಡಪ್ಪನವರು ಕಟ್ಟಿದ ಈ ಸಂಘಕ್ಕೆ ಇತಿಹಾಸವಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸಂಘದ ಖಾತೆಯಲ್ಲಿ 1.01 ಕೋಟಿ ರೂ. ಮೊತ್ತ ಇದೆ. ಇದನ್ನು 2 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಇದೆ. ಈಗ ಆಪದ್ಬಾಂಧವ ಯೋಜನೆ ರೂಪಿಸಿ ಪ್ರತಿ ತಿಂಗಳು ಸದಸ್ಯರೊಬ್ಬರು 200 ರೂ. ಕೊಡುತ್ತಿದ್ದಾರೆ. ಕಳೆದ ತಿಂಗಳು 55 ಸಾವಿರ ರೂ. ಸಂಗ್ರಹವಾಗಿದೆ. ಇದರಲ್ಲಿ ಇಬ್ಬರು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಸರ್ಕಾರದಿಂದಲೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಧನ ಕೊಡಿಸಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ ಮಾತನಾಡಿದರು.
ನೂತನ ಅಧ್ಯಕ್ಷ ಬಂಡು ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಬಸವರಾಜ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ನಿಗರ್ಮಿತ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net