Jotishy workshop 19ರಂದು ಜ್ಯೋತಿಷ್ಯ ವಾಸ್ತು ಕಾರ್ಯಾಗಾರ

Jotishy workshop ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಸದಸ್ಯ ಸುರೇಶ ಕೊಪ್ಪರ ಮಾತನಾಡಿದರು.
Jotishy workshop ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಸದಸ್ಯ ಸುರೇಶ ಕೊಪ್ಪರ ಮಾತನಾಡಿದರು.
Published on
ಹುಬ್ಬಳ್ಳಿ: Jotishy workshop ಧಾರವಾಡದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಮತ್ತು ಪಂಚಾಂಗ ಸಮಿತಿ ಹಾಗೂ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಏ. 19ರಂದು ಜ್ಯೋತಿಷ್ಯ ಹಾಗೂ ವಾಸ್ತು ಕಾರ್ಯಾಗಾರವನ್ನು ಧಾರವಾಡದ ಗಾಂಧಿ ಚೌಕ್​ ಬಳಿಯ ಸಂಸ್ಕೃತ ಪಾಠಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಸದಸ್ಯ ಸುರೇಶ ಕೊಪ್ಪರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೋತಿಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ವೈಜ್ಞಾನಿಕತೆ ತಿಳಿಸಿಕೊಡುವ ಸಲುವಾಗಿ ವೃತ್ತಿಪರರು ಸೇರಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ಜ್ಯೋತಿಷ್ಯ ಹಾಗೂ ವಾಸ್ತು ಕಾರ್ಯಾಗಾರ ನಡೆಯಲಿದೆ ಎಂದರು.
ಮಧ್ಯಾಹ್ನ ಭೋಜನದ ನಂತರ ಸಾರ್ವಜನಿಕರ ಎಲ್ಲ ಜ್ಯೋತಿಷ್ಯ ಹಾಗೂ ವಾಸ್ಯು ಸಮಸ್ಯೆಗಳಗೆ ಉಚಿತ ಸಲಹೆ ಹಾಗೂ ಪರಿಹಾರ ನೀಡಲಾಗುವುದು. 200ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಒಕ್ಕೂಟದ ಅನೇಕರು ಪಾಲ್ಗೊಂಡು ಜನರಿಗೆ ಸಲಹೆ ನೀಡಲಿದ್ದಾರೆ ಎಂದರು.
ಇಗ್ನೋ ನಿವೃತ್ತ ವಲಯ ಮುಖ್ಯಸ್ಥ ಡಾ. ಜಿ.ಎಚ್​. ಇಮ್ರಾಪುರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕೆವಿಜಿ ಬ್ಯಾಂಕ್​ ನಿವೃತ್ತ ಪ್ರಬಂಧಕ ನರಸಿಂಹರಾವ ಸೋಮಲಾಪುರ ಹಾಗೂ ಇತರರು ಪಾಲ್ಗೊಳ್ಳುವರು.
ಖ್ಯಾತ ಮನೋರೋಗ ತಜ್ಞ ಹಾಗೂ ಜ್ಯೋತಿಷಿ ಡಾ. ಆನಂದ ಹಂದಿಗೋಳ ಅಧ್ಯಕ್ಷತೆ ವಹಿಸುವರು. ಒಕ್ಕೂಟದ ಸದಸ್ಯರು ವಿವಿಧ ವಿಷಯಗಳ ಮೇಲೆ ಉಪನ್ಯಾಸ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net