ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಟಿ ಕೋಳಿ ಇವರು ತಿಂದರು, ಅವರು ತಿಂದರು ಎನ್ನುವುದೇ ಬಹುದೊಡ್ಡ ಚರ್ಚೆಯಾಗಿದೆ. ಅಧಿಕಾರ ಹಂಚಿಕೆ ಕುರಿತ ಚರ್ಚೆಗೆ ಪೂರ್ಣವಿರಾಮ ಹಾಕಿದ್ದೇವೆ ಎಂದು ಯಾರೂ ಎಲ್ಲಿಯೂ ಹೇಳುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಮಾಂಡ್ ಇಲ್ಲದ ಹೈ ಆಗಿದೆ. ಅತ್ಯಂತ ದುರ್ಬಲವಾಗಿದೆ ಎಂದು ಲೇವಡಿ ಮಾಡಿದರು.