jgmm medical ಹುಬ್ಬಳ್ಳಿಯ ಜೆಜಿಎಂಎಂ ವೈದ್ಯಕಿಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟನೆಯಲ್ಲಿ ಡಾ. ಸಂದೀಪ ಶ್ರೀವಾಸ್ತವ, ಶಂಕರಣ್ಣ ಮುನವಳ್ಳಿ, ಡಾ. ವಿ.ಎಂ. ಪಟ್ಟಣಶೆಟ್ಟಿ, ಡಾ. ವಿ.ಡಿ. ಪಾಟೀಲ, ಇತರರು ಪಾಲ್ಗೊಂಡಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆಎಲ್ಇ ಜೆಜಿಎಂಎಂ ಕಾಲೇಜು ಸಾಧನೆ
ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಒರಿಯಂಟೇಶನ್
ಹುಬ್ಬಳ್ಳಿ: jgmm medical ಇಲ್ಲಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕಿಯ ಮಹಾವಿದ್ಯಾಲಯದ ವತಿಯಿಂದ ಅತ್ಯುತ್ತಮ ಶೈಕ್ಷಣಿಕ ಸಾಧನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
2021-22ನೇ ಸಾಲಿನಲ್ಲಿ ಸ್ಥಾಪನೆಯಾದ ಜೆಜಿಎಂಎಂ ವೈದ್ಯಕಿಯ ಕಾಲೇಜಿನ ಉದ್ಘಾಟನಾ ಬ್ಯಾಚ್ ಉತ್ತಮ ಸಾಧನೆ ಮಾಡಿದೆ. 3 ಡಿಸ್ಟಿಂಕ್ಷನ್, 72 ಪ್ರಥಮ ದರ್ಜೆ ಮತ್ತು 69 ರಷ್ಟು ದ್ವೀತಿಯ ದರ್ಜೆಯ ಫಲಿತಾಂಶ ದಾಖಲಿಸಿದ್ದಾರೆ. ಒಟ್ಟು 144 ವಿದ್ಯಾರ್ಥಿಗಳು ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗೆ ಹಾಜರಾಗಿದ್ದರು.
ನವೀನ ಆಲೋಚನೆಗಳು ಮತ್ತು ಬೆಳಗಾವಿಯ ಕಾಹೇರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಭಾಕರ ಕೋರೆ, ಕೆಎಲ್ಇ ಸೊಸೈಟಿಯ ಅಧ್ಯಕ್ಷ ಮತ್ತು ನಿರ್ವಹಣಾ ಮಂಡಳಿಯ ನಿರ್ದೇಶಕ ಅಮಿತ್ ಕೋರೆ ಅವರ ನಿರಂತರ ಬೆಂಬಲದಿಂದ ಈ ಸಾಧನೆಯಾಗಿದೆ.
ಇತ್ತೀಚೆಗೆ ಏರ್ಪಡಿಸಿದ್ದ ಇಂರ್ಟನಶಿಪ್ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಹೇರನ ಕುಲಪತಿ ಡಾ. ಸಂದೀಪ ಶ್ರೀವಾಸ್ತವ, ಈ ಅದ್ಭುತ ಯಶಸ್ಸಿಗೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಆಡಳಿತ ಮಂಡಳಿಯ ದೃಢ ಬೆಂಬಲ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಲ್ಇಎಸ್ ಹುಬ್ಬಳ್ಳಿ ಸ್ಥಳಿಯ ಆಡಳಿತ ಮಂಡಳಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ಉತ್ತರ ಕರ್ನಾಟಕದ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕಿಯ ಶಿಕ್ಷಣ, ಆಸ್ಪತ್ರೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಕೆಎಲ್ಇ ಬದ್ಧವಾಗಿದೆ ಎಂದರು.