ಹುಬ್ಬಳ್ಳಿ: janapad utsav ಇಲ್ಲಿಯ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯ 18ನೇ ವಾರ್ಷಿಕೋತ್ಸವ ಅಂಗವಾಗಿ ಮೇ 23ರಂದು ಸಂಜೆ 4ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಜನಪದ ಪರಂಪರಾ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚನ್ನಯ್ಯ ವಸ್ತ್ರದ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಕಾರ್ಯಕ್ರಮ ಉದ್ಘಾಟಿಸುವರು.
ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಮಾಜಿ ಚೇರ್ಮನ್ ಮಹೇಂದ್ರ ಸಿಂಘಿ ಅಧ್ಯಕ್ಷತೆ ವಹಿಸುವರು. ಮಹೇಶ್ವರಿ ಕ್ರೆಡಿಟ್ ಕೋ ಆಪ್ ಸೊಸೈಟಿ ಅಧ್ಯಕ್ಷ ಬಂಗಾರೇಶ ಹಿರೇಮಠ ಉಪಸ್ಥಿತರಿರುವರು ಎಂದರು.
ಶಿರಸಿ ನಾಟ್ಯಾಂಜಲಿ ಕಲಾ ಕೇಂದ್ರದ ಡಾ. ಸಹನಾ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಡಾ. ಪ್ರಕಾಶ ಮಲ್ಲಿಗವಾಡ ಆಶಯ ನುಡಿಗಳನ್ನಾಡುವರು. ವಿದುಷಿ ಚೈತ್ರಾ ವಸ್ತ್ರದ ಹಾಗೂ ತಂಡ ನಟರಾಜ ಪಾದಪೂಜೆ ನೆರವೇರಿಸಲಿದ್ದಾರೆ ಎಂದರು.
ನಂತರದಲ್ಲಿ ಜಾನಪದ ನೃತ್ಯ, ಜಗ್ಗಲಗಿ ವಾದನ, ಗೊಂಬೆ ಕುಣಿತ, ಜಾನಪದ ಹಾಡುಗಳು, ಸಾಮೂಹಿಕ ತಬಲಾವಾದನ, ದೇಶಭಕ್ತಿ ಸಮೂಹ ನೃತ್ಯ, ಸೋಬಾನೆ ಪದ, ಭರತನಾಟ್ಯ, ಜಾನಪದ ಗೀತೆ, ಕರಡಿ ಮಜಲು.
ಡೊಳ್ಳು ಕುಣಿತ, ಆಧುನಿಕ ನೃತ್ಯ, ಸಾಹಸ ಪ್ರದರ್ಶನ, ಜಾಂಝ್ ಮೇಳ, ನರಸಿಂಹ ನೃತ್ಯ ರೂಪಕ ಕಲಾ ಪ್ರದರ್ಶನಗಳನ್ನು ವಿವಿಧ ಕಲಾ ತಂಡದವರು ಪ್ರಸ್ತುತಪಡಿಸುವರು ಎಂದು ಹೇಳಿದರು.