jain winners ಜೈನ್ ಕಾಲೇಜಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್
jain winners ವಿಜಯಪಥ ಯುವಜನೋತ್ಸವದಲ್ಲಿ ಗ್ರ್ಯಾಂಡ್ ಚಾಂಪಿಯನ್ಶಿಪ್ ಪಡೆದ ಹುಬ್ಬಳ್ಳಿಯ ಜೈನ್ ಪದವಿ ಕಾಲೇಜಿನ ವಿದ್ಯಾರ್ಥಿಗಳು. ಡಾ. ಮಾಯಾ ಕುಲಹಳ್ಳಿ ಇದ್ದಾರೆ.
Published on:
Copied
Follow Us
ಹುಬ್ಬಳ್ಳಿ: jain winners ಇಲ್ಲಿಯ ಕೆಎಲ್ಇ ಸಿಬಿಎ ಆಯೋಜಿಸಿದ್ದ ಅಂತರ -ಕಾಲೇಜು ಯುವಜನೋತ್ಸವ "ವಿಜಯಪಥ'ದಲ್ಲಿ ನಗರದ ಜೈನ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗ್ರ್ಯಾಂಡ್ ಚಾಂಪಿಯನ್ಶಿಪ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಅಂತರ ಕಾಲೇಜು ಯುವಜನೋತ್ಸವದಲ್ಲಿ ವಿವಿಧೆಡೆಯಿಂದ ಹತ್ತಾರು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸುತ್ತುಗಳಲ್ಲಿ ಜೈನ್ ಕಾಲೇಜ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು. ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ.
ತನಿಷ್ಕ ಜೈನ್ ಪ್ರಜಾಪಾಲಕ ವಿಭಾಗದಲ್ಲಿ ಪ್ರಥಮ, ಪೂಜಾ ಜೈನ್ ನಾರದ ವಿಭಾಗದಲ್ಲಿ ದ್ವಿತೀಯ, ಸಯ್ಯಮ ಚೋಪ್ರಾ ಕೌಟಿಲ್ಯದಲ್ಲಿ ದ್ವಿತೀಯ, ಪಕ್ಷಾಲ ಡಿ. ಕ್ರಿಯಾ ಚಕ್ರವರ್ತಿಯಲ್ಲಿ ದ್ವಿತೀಯ.
ಏನಮ್ ಜೈನ್ ದಕ್ಷಿಣಪಥೇಶ್ವರ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಡಾ. ಮಾಯಾ ಕುಲಹಳ್ಳಿ ತಿಳಿಸಿದ್ದಾರೆ.
ಜೈನ್ ಕಾಲೇಜಿನ ವಿದ್ಯಾರ್ಥಿಗಳ ಈ ಅದ್ವಿತೀಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.