ಗಣತಿ ನಮೂನೆಗಳನ್ನು ಬಿಎಲ್​ಒಗಳಿಗೆ ಹಿಂದಿರುಗಿಸುವುದು ಕಡ್ಡಾಯ

ಧಾರವಾಡ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ರಾಜಕೀಯ ಪಗಳ ಪ್ರತಿನಿಧಿಗಳ ಸಭೆ ಜರುಗಿತು.
ಧಾರವಾಡ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ರಾಜಕೀಯ ಪಗಳ ಪ್ರತಿನಿಧಿಗಳ ಸಭೆ ಜರುಗಿತು.
Published on
ಧಾರವಾಡ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ಈಗಾಗಲೇ ವಿತರಣೆಯಾದ ಗಣತಿ ನಮೂನೆಗಳಲ್ಲಿ ಮಾಹಿತಿ ಭತಿರ್ ಮಾಡಿ ಬಿಎಲ್​ಒಗಳಿಗೆ ಕಡ್ಡಾಯವಾಗಿ ಹಿಂದಿರುಗಿಸಬೇಕು. ನಮೂನೆಗಳನ್ನು ಹಿಂದಿರುಗಿಸದಿದ್ದರೆ ಅಂತಹ ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ರಾಜಕೀಯ ಪಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ವಿತರಣೆ ಮಾಡಿದ ನಮೂನೆಗಳ ಪೈಕಿ ಶೇ. 69.74ರಷ್ಟು ನಮೂನೆಗಳನ್ನು ಬಿಎಲ್​ಒ ಆ್ಯಪ್​ನಲ್ಲಿ ಗಣಕೀಕರಣ ಕಾರ್ಯ ರ್ಪೂಣಗೊಳಿಸಿದ್ದಾರೆ. ಇನ್ನೂ ಶೇ. 30.26ರಷ್ಟು ಗಣತಿ ನಮೂನೆಗಳು ಗಣಕೀಕರಣ ಬಾಕಿ ಇದೆ. ಎಲ್ಲ ಮತದಾರರು ಸಂಬಂಧಿಸಿದ ಬಿಎಲ್​ಒ ಅಥವಾ ಬಿಎಲ್​ಎ ಅವರಿಗೆ ಕಡ್ಡಾಯವಾಗಿ ಹಿಂದಿರುಗಿಸಬೇಕು ಎಂದರು.
ಜು. 27ರಿಂದ 31ರವರೆಗೆ ಎಲ್ಲ ಬಿಎಲ್​ಒ ಹಾಗೂ ಬಿಎಲ್​ಎಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೆ ಭೇಟಿ ನೀಡಿ, ವಿತರಿಸಿದ ನಮೂನೆಗಳನ್ನು ಹಿಂಪಡೆಯಬೇಕು ಎಂದು ಸೂಚಿಸಿದರು. ಸ್ಥಳಾಂತರ, ಮರಣ, ದ್ವಿಪ್ರತಿ ಹಾಗೂ ಇತರೆ ಮತದಾರರ ಯಾದಿಯಲ್ಲಿರುವ ಮತದಾರರು ಯಾವುದೇ ಮಾಹಿತಿಗಾಗಿ ಸಂಬಂಧಪಟ್ಟ ಮತಗಟ್ಟೆಯ ಬಿಎಲ್​ಒ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳಿಗೆ ಸಂಪಕಿರ್ಸಬೇಕು ಎಂದರು.
ಅಪರ ಜಿಲ್ಲಾದಿಕಾರಿ ಗೀತಾ ಸಿ.ಡಿ., ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ಜಿ.ಪಂ. ಸಿಇಒ ಮಲ್ಲಿಕಾರ್ಜುನ ತೊದಲಬಾಗಿ, ಮತದಾರರ ನೋಂದಣಾಧಿಕಾರಿಗಳು, ರಾಜಕೀಯ ಪದ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net