iskcon temple ಹುಬ್ಬಳ್ಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
iskcon temple ಹುಬ್ಬಳ್ಳಿ- ಧಾರವಾಡ ಇಸ್ಕಾನ್ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಸ್ಕಾನ್ ದೇವಸ್ಥಾನದಲ್ಲಿ ವಿಜೃಂಭಣೆಯ ಆಚರಣೆ
ಶ್ರೀ ಕೃಷ್ಣ ಮಂದಿರಗಳಲ್ಲಿ ವಿಶೇಷ ಪೂಜೆ ಅಲಂಕಾರ
ಹುಬ್ಬಳ್ಳಿ: iskcon temple ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ವಿವಿಧೆಡೆ ಸಂಭ್ರಮದಿಂದ ಆರಾಧನೆ ಹಾಗೂ ಹಬ್ಬ ಆಚರಣೆ ಮಾಡಲಾಯಿತು. ವಿವಿಧ ದೇವಸ್ಥಾನಗಳಲ್ಲಿ ಶ್ರೀ ಕೃಷ್ಣ ಮಂದಿರಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಅನೇಕ ಶಾಲೆಗಳಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ಗಮನ ಸೆಳೆದರು.
ಹುಬ್ಬಳ್ಳಿ-ಧಾರವಾಡ ಇಸ್ಕಾನ್ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಎರಡನೇ ದಿನ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಬೆಳಗ್ಗೆ ಮಂಗಳಾರತಿ ಹಾಗೂ ಶ್ರೀ ಗುರುವಾಷ್ಟಕಂ ಪಠಣದೊಂದಿಗೆ ಜನ್ಮಾಷ್ಟಮಿ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ರಾಧಾ ಗೋವಿಂದ ದೇವಜಿ ಹಾಗೂ ಶ್ರೀ ಕೃಷ್ಣ ಬಲರಾಮರು ವೃಂದಾವನದಲ್ಲಿ ವಿಶೇಷವಾಗಿ ಕೈಯಿಂದ ತಯಾರಿಸಿದ ನೀಲಿ ಮತ್ತು ಚಿನ್ನದ ಬಣ್ಣದ ವೃಂದಾವನ ಚಂದ್ರ ಅಲಂಕಾರದಲ್ಲಿ ಕಂಗೊಳಿಸಿದರು.
ದಿನವಿಡೀ ಭಕ್ತರು ದರ್ಶನ, ಅರ್ಚನೆ ಹಾಗೂ ವಿವಿಧ ಸೇವೆಗಳಲ್ಲಿ ಭಾಗವಹಿಸಿದರು. ಭಕ್ತರು ಪ್ರೀತಿಯಿಂದ ತಯಾರಿಸಿದ 108 ಬಗೆಯ ಭಕ್ಷ್ಯಗಳ ವಿಶೇಷ ಮಹಾನೈವೇದ್ಯವನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ಶುದ್ಧ ದೇಸಿ ತುಪ್ಪ ಬಳಸಿ ತಯಾರಿಸಿದ 160 ಕೆ.ಜಿ. ತೂಕದ ಲಡ್ಡು ವಿಶೇಷ ಆಕರ್ಷಣೆಯಾಗಿತ್ತು. ಸತ್ಸಂಗ ಸದಸ್ಯರ ಭಕ್ತೀಗಿತೆಗಳು ಆಧ್ಯಾತ್ಮಿಕ ಮೆರುಗು ನೀಡಿದವು.
ಸಂಜೆ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಿದವು. ಶ್ರೀರಾಧಾ ಗೋವಿಂದ ದೇವಜಿಗೆ ಸಂಕ್ಷಿಪ್ತ ಅಭಿಷೇಕ ನೆರವೇರಿಸಲಾಯಿತು.
ರಾತ್ರಿ ಶಂಖನಾದದೊಂದಿಗೆ ಮಹಾಭಿಷೇಕ, ಚಂದನದ ಎಣ್ಣೆ, ಪಂಚಗವ್ಯ, ಪಂಚಾಮೃತ, ವಿವಿಧ ಹಣ್ಣಿನ ರಸಗಳು ಹಾಗೂ ರತ್ನಜಲದಿಂದ ವಿಧಿವತ್ತಾಗಿ ಅಭಿಷೇಕ ನೆರವೇರಿಸಲಾಯಿತು.
ಇಸ್ಕಾನ್ ಅಧ್ಯಕ್ಷ ರಾಜೀವ್ ಲೋಚನ ದಾಸ ಅವರು ಭಗವಾನ್ ಶ್ರೀಕೃಷ್ಣನ ಅವತರಣೆಯ ಮಹತ್ವ ಹಾಗೂ ಅವರ ದಿವ್ಯ ಲೀಲೆಗಳ ಕುರಿತು ಮಾತನಾಡಿದರು.