ಸ್ಪೇನ್‌ನಲ್ಲಿ ಅಂತಾರಾಷ್ಟ್ರೀ ಅಧ್ಯಯನ ಭೇಟಿ

ಕವಿವಿ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಪ್ರತಿನಿಧಿಗಳು ಭಾಗಿ
ಕವಿವಿ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಪ್ರತಿನಿಧಿಗಳು ಭಾಗಿ
Published on
ಧಾರವಾಡ: ಸ್ಪೇನ್ ದೇಶದ ಧಾರ್ಮಿಕ ಪ್ರವಾಸೋದ್ಯಮದ ಮೂಲಕ ಉನ್ನತ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ ಸಂಶೋಧನಾ ಯೋಜನೆಯ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಪ್ರತಿನಿಽಗಳು ಸ್ಪೇನ್‌ನ ಸ್ಯಾಂಟಿಯಾಗೊ ಡೆ ಕಾಂಪೋಸ್ಟೆಲಾ ವಿವಿಯದಲ್ಲಿ ನಡೆದ ಅಂತಾರಾಷ್ಟ್ರೀಯ ಅಧ್ಯಯನ ಭೇಟಿಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಎಂಟು ರಾಷ್ಟ್ರಗಳು ಹಾಗೂ 16 ಅಂತಾರಾಷ್ಟ್ರೀಯ ಪಾಲುದಾರರನ್ನು ಒಳಗೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಯೋಜನಾ ವ್ಯವಸ್ಥಾಪಕ ಪ್ರೊ. ಜಗದೀಶ ಕಿವುಡನವರ್ ಮತ್ತು ಕಿರಿಯ ತಜ್ಞ ಕೇದಾರನಾಥ ಅಂಗಡಿ ಅವರು ಏ. 20ರಿಂದ 24ರವರೆಗೆ ನಡೆದ ಅಧ್ಯಯನ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.
ಅಧ್ಯಯನ ಭೇಟಿಯಲ್ಲಿ ಯುರೋಪ್, ಏಷ್ಯಾ ಹಾಗೂ ಆಫ್ರಿಕಾದ ಸಂಶೋಧಕರು ಮತ್ತು ವಿದ್ವಾಂಸರೊಂದಿಗೆ ಧಾರ್ಮಿಕ ಯಾತ್ರೆಗಳು ಜಾಗತಿಕ ಸಂಸ್ಕೃತಿ, ಪರಂಪರೆ, ಸಮುದಾಯ ಹಾಗೂ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ವಿಶ್ವ ಪರಂಪರೆಯ ತಾಣವಾದ ಪ್ರಸಿದ್ಧ ಕ್ಯಾಮಿನೋ ಡೆ ಸ್ಯಾಂಟಿಯಂಗೊ ಯಾತ್ರಾ ಮಾರ್ಗದ ನಿರ್ವಹಣೆ, ಪರಂಪರೆ ಸಂರಕ್ಷಣೆ ಹಾಗೂ ಸುಸ್ಥಿರ ಪ್ರವಾಸೋದ್ಯಮ ಮಾದರಿಗಳನ್ನು ಅಧ್ಯಯನ ಮಾಡಲಾಯಿತು.
ಮೆಲಿಡೆಯಿಂದ ರಿಬಡಿಸೋವರೆಗೆ 14 ಕಿ.ಮೀ. ಕಾಲ್ನಡಿಗೆ ಕ್ಷೇತ್ರ ಅಧ್ಯಯನ ನಡೆಸಲಾಯಿತು. ಈ ವೇಳೆ ಯಾತ್ರಿಕರ ಸಂಚಾರ ವ್ಯವಸ್ಥೆ, ಗ್ರಾಮೀಣ ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹಾಗೂ ಮೂಲಸೌಕರ್ಯ ನಿರ್ವಹಣೆಯ ಕುರಿತು ನೇರ ಅನುಭವ ಪಡೆಯಲಾಯಿತು. ಸ್ಯಾಂಟಿಯಾಗೊ ಕ್ಯಾಥೆಡ್ರಲ್, ಯÁತ್ರಿಕರ ಕಚೇರಿ ಹಾಗೂ ಸ್ಥಳೀಯ ಸಮುದಾಯ ಸಂಘಟನೆಗಳ ಕಾರ್ಯವೈಖರಿ ಸಹ ಪರಿಶೀಲಿಸಲಾಯಿತು.
ಸುಸ್ಥಿರ ಯಾತ್ರಾ ಮಾರ್ಗಗಳ ಅಭಿವೃದ್ಧಿ, ಪರಂಪರೆ ಸಂರಕ್ಷಣೆ ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮದ ಪರಿಣಾಮಕಾರಿ ಮಾದರಿಗಳ ಕುರಿತು ಮಹತ್ವದ ಅರಿವು ದೊರೆತಿದೆ. ಈ ಅನುಭವವನ್ನು ಭಾರತದ ಪ್ರಮುಖ ಯಾತ್ರಾ ಕೇಂದ್ರಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಿಂದ ಪಡೆದ ಜ್ಞಾನ ಮತ್ತು ಅನುಭವವು ಕವಿವಿ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಶಿಕ್ಷಣ, ಸಂಶೋಧನೆ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಪ್ರವಾಸೋದ್ಯಮ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ಕೆ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net