ವೈದ್ಯ ದಂಪತಿಗೆ ಅಂತಾರಾಷ್ಟ್ರೀಯ ಅರ್ಹತೆ

ಡಾ. ಕೋಮಲ್​ ರೇವಣ್ಕರ್​
ಡಾ. ಕೋಮಲ್​ ರೇವಣ್ಕರ್​
Published on
ಧಾರವಾಡ: ನಗರದ ಮಾಳಮಡ್ಡಿಯ ಪ್ರಶಾಂತ ಆಸ್ಪತ್ರೆ ಮತ್ತು ಐವಿಎಫ್​ ಕೇಂದ್ರದ ವೈದ್ಯರಾದ ಡಾ. ಕೋಮಲ್​ ರೇವಣ್ಕರ್​ ಹಾಗೂ ಡಾ. ಸಮೀರ್​ ಕುಲಕರ್ಣಿ ಅವರು ಯುನೈಟೆಡ್​ ಕಿಂಗ್​ಡಮ್​ನ ರಾಯಲ್​ ಕಾಲೇಜ್​ ಆಫ್​ ಆಬ್ಸೆ ್ಟಟ್ರಿಷಿಯನ್ಸ್​ ಆ್ಯಂಡ್​ ಗೈನಕಾಲಜಿಸ್ಟ್​ (ಆರ್​ಜಿಒಜಿ) ವತಿಯಿಂದ ನಡೆಸಲಾಗುವ ವಿಶ್ವಪ್ರಸಿದ್ಧ ಎಂಆರ್​ಸಿಒಜಿ ಪಾರ್ಟ್​ 3 ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಅಂತಾರಾಷ್ಟ್ರೀಯ ಅರ್ಹತೆ ಸಾಧಿಸಿದ್ದಾರೆ.
ಸ್ತ್ರೀರೋಗ ಮತ್ತು ಪ್ರಸೂತಿ ವಿಜ್ಞಾನ ಕ್ಷೇತ್ರದಲ್ಲಿ ಎಂಆರ್​ಸಿಒಜಿ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಅರ್ಹತೆಗಳಲ್ಲಿ ಒಂದು. ಪರೀಕ್ಷೆಯು ವೈದ್ಯಕಿಯ ಜ್ಞಾನ, ರೋಗಿಗಳೊಂದಿಗೆ ಸಂವಹನ ಕೌಶಲ, ರೋಗಿಯ ಸುರಕ್ಷತೆ, ನೈತಿಕ ವೈದ್ಯಕಿಯ ಅಭ್ಯಾಸ ಹಾಗೂ ಸಂಕೀರ್ಣ ಚಿಕಿತ್ಸಾ ಸಂದರ್ಭಗಳಲ್ಲಿ ಸಾಕ್ಷ್ಯಾಧಾರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತದೆ.
ಈ ಕುರಿತು ಮಾತನಾಡಿದ ಸ್ತ್ರೀರೋಗ, ಪ್ರಸೂತಿ ತಜ್ಞೆ ಹಾಗೂ ಸಂತಾನೋತ್ಪತ್ತಿ ತಜ್ಞೆ ಡಾ. ಕೋಮಲ್​ ರೇವಣ್ಕರ್​ ಹಾಗೂ ಫೀಟಲ್​ ಮೆಡಿಸಿನ್​ ತಜ್ಞ ಹಾಗೂ ಗೈನಕಾಲಜಿಕಲ್​ ಲ್ಯಾಪರೋಸ್ಕೋಪಿಕ್​ ಶಸ್ತ್ರಚಿಕಿತ್ಸಕ ಡಾ. ಸಮೀರ್​ ಕುಲಕರ್ಣಿ ಅವರು, "ಇದು ಕೇವಲ ವೈಯಕ್ತಿಕ ಸಾಧನೆಯಲ್ಲ. ವಿಶ್ವಮಟ್ಟದ ಮತ್ತು ಸಾಕ್ಷ್ಯಾಧಾರಿತ ಆರೋಗ್ಯ ಸೇವೆ ಒದಗಿಸುವ ಅವಕಾಶವಾಗಿದೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net