college fest ಅಂತರ್​ ಕಾಲೇಜು ವಿಜ್ಞಾನ ಉತ್ಸವ ಎಲಿಸಿಯಮ್​

college fest ಹುಬ್ಬಳ್ಳಿಯ ಪಿ.ಸಿ. ಜಾಬಿನ್​ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಲಿಸಿಯಮ್​ ಉತ್ಸವದಲ್ಲಿ ಪಿಯು ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಡಾ. ನೀಲಕಮಲ್​ ಮಹಾಂತ, ಶಂಕರಣ್ಣ ಮುನವಳ್ಳಿ, ಸಯೀದ್​ ಅಹ್ಮದ್​, ಹನುಮಂತಪ್ಪ, ವಿ.ಆರ್​. ವಾಘ್ಮೋಡೆ, ಡಾ. ರಾಜೇಶ ಎನ್​.ಕೆ. ಇತರರು ಇದ್ದರು.

Published on
ಹುಬ್ಬಳ್ಳಿ: college fest ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಅಂತರ್​ ಕಾಲೇಜು ವಿಜ್ಞಾನ ಮತ್ತು ಸಾಂಸ್ಕೃತಿಕ ಉತ್ಸವ ಎಲಿಸಿಯಮ್​ ಅನ್ನು ಇಲ್ಲಿಯ ಪಿ.ಸಿ. ಜಾಬಿನ್​ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಪರಂಪರೆ ಬೆಳೆಸುವುದು, ಮನಸ್ಸುಗಳನ್ನು ಬೆಳಗಿಸುವ ಆಶಯದೊಂದಿಗೆ ಏರ್ಪಡಿಸಿದ್ದ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
ಉದ್ಘಾಟನೆ ನೆರವೇರಿಸಿದ ಧಾರವಾಡ ಐಐಟಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನೀಲಕಮಲ್​ ಮಹಾಂತ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಸಂಶೋಧನಾ -ಆಧಾರಿತ ಚಿಂತನೆಯನ್ನು ಅನುಸರಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಎಲಿಸಿಯಮ್​ ವೇದಿಕೆಯಾಗಿದೆ. ಇಂತಹ ವೇದಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಂಸ್ಥೆ ಬದ್ಧವಾಗಿದೆ ಎಂದರು.
ಮೊರಬ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸಯೀದ್​ ಅಹ್ಮದ್​, ಪ್ರಾಚಾರ್ಯರ ಸಂಘದ ಅಧ್ಯಕ್ಷ ಹನುಮಂತಪ್ಪ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ವರ್ಷಾ ಮತ್ತು ಪೂಜಾ, ಐಕ್ಯೂಎಸಿ ಸಂಯೋಜಕ ಡಾ. ರಾಜೇಶ ಎನ್​.ಕೆ., ವಿ.ಆರ್​. ವಾಘ್ಮೋಡೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net