intellquest ಇಂಟೆಲ್ಲಿಕ್ವೆಸ್ಟ್ ಸ್ಪರ್ಧೆ ಶಾಂತಿನಿಕೇತನ ಚಾಂಪಿಯನ್
intellquest ಹುಬ್ಬಳ್ಳಿಯ ಐಬಿಎಂಆರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಇಂಟೆಲ್ಲಿಕ್ವೆಸ್ಟ್ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ. ಎಚ್.ವಿ. ಬೆಳಗಲಿ, ಸಂದೀಪ ಬೂದಿಹಾಳ, ಡಾ. ಇಗ್ನೇಶ್ ಸಕ್ರಿ, ಡಾ. ಅರುಣ ಶೆಟ್ಟಿ, ಡಾ. ರೇಖಾ ಮಹೇಂದ್ರಕರ್ ಇದ್ದರು.
ಹುಬ್ಬಳ್ಳಿ: intellquest ಪ್ರೌಢಶಾಲೆ ವಿದ್ಯಾರ್ಥಿಗಳ ಕೌಶಲ, ಪ್ರತಿಭೆ ಮತ್ತು ಜ್ಞಾನ ಪ್ರದರ್ಶಿಸಲು ವೇದಿಕೆ ಒದಗಿಸುವ ಸಲುವಾಗಿ ಇಲ್ಲಿಯ ಐಬಿಎಂಆರ್ ಸಂಸ್ಥೆಗಳ ಸಮೂಹವು ಅಂತರ್ ಶಾಲಾ ಸ್ಪರ್ಧೆ ಇಂಟೆಲ್ಲಿಕ್ವೆಸ್ಟ್ 2026ಅನ್ನು ಆಯೋಜಿಸಿತ್ತು.
ವಿದ್ಯಾಭಾರತಿ ಫೌಂಡೇಷನ್ನ ಐಬಿಎಂಆರ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಇಂಟೆಲ್ಲಿಕ್ವೆಸ್ಟ್ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.
ನಗರದಾದ್ಯಂತ 24 ಶಾಲೆಗಳಿಂದ ಒಟ್ಟು 34 ತಂಡಗಳು ಸ್ಪೆಲ್ಬೀ, ವಿಜ್ಞಾನ ರಂಗೋಲಿ, ರಸಪ್ರಶ್ನೆ, ಕಥೆ ಹೇಳುವುದು, ಮುಖ ಚಿತ್ರ ಬಿಡಿಸುವುದು, ಕ್ರೀಡೆ, ನೃತ್ಯ ಮತ್ತು ವೃತ್ತಿಪರ ಫ್ಯಾನ್ಸಿ ಡ್ರೆಸ್ನಂತಹ ವಿವಿಧ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಿದವು.
ಅತಿಥಿಯಾಗಿ ಪಾಲ್ಗೊಂಡಿದ್ದ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ವಿಜಯನಗರ ಪಿಯು ಕಾಲೇಜಿನ ಪ್ರಾಚಾರ್ಯ ಸಂದೀಪ ಬೂದಿಹಾಳ, ಐಬಿಎಂಆರ್ ಗ್ರೂಪ್ ಸಿಇಒ ಡಾ. ಇಗ್ನೇಶ್ ಸಕ್ರಿ, ಡಾ. ಅರುಣ ಶೆಟ್ಟಿ, ಎಂಬಿಎ ನಿರ್ದೇಶಕಿ ಡಾ. ರೇಖಾ ಮಹೇಂದ್ರಕರ್ ಅವರು ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಶಸ್ತಿ ಆಡೂರ್, ಮರಿಯಮ್ ಖೋಜೆ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ಪ್ರೊ. ನಜೀಮ್ ಹುಸೇನ್ ಮಿಶ್ರಿಕೋಟಿ ಸ್ವಾಗತಿಸಿದರು. ಉಜ್ಮಾ ಪಲ್ಲನ್ ವಂದಿಸಿದರು.