

| ತಾಲೂಕು | ಅರ್ಜಿ ಸಂಖ್ಯೆ | ಎಕರೆ | ವಿಮೆ ಕಂತು |
|---|---|---|---|
| ಧಾರವಾಡ | 5650 | 13141 | 2.12 ಕೋಟಿ ರೂ. |
| ಕಲಘಟಗಿ | 1542 | 3680 | 59.56 ಲಕ್ಷ ರೂ. |
| ಅಳ್ನಾವರ | 1178 | 2372 | 38.39 ಲಕ್ಷ ರೂ. |
| ಹುಬ್ಬಳ್ಳಿ ಗ್ರಾ. | 289 | 907 | 14.69 ಲಕ್ಷ ರೂ. |
| ಹುಬ್ಬಳ್ಳಿ ನ | 132 | 458 | 7.42 ಲಕ್ಷ ರೂ. |
| ಕುಂದಗೋಳ | 90 | 214 | 3.47 ಲಕ್ಷ ರೂ. |
ಹಾವೇರಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ರೈತರಿಗೆ ಈಗಾಗಲೇ ವಿಮೆ ಹಣ ಜಮೆಯಾಗಿದೆ. ಧಾರವಾಡ ಜಿಲ್ಲೆಗಷ್ಟೇ ವಿಳಂಬ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ, ತಾಂತ್ರಿಕ ಅಡಚಣೆಯಾಗಿದೆ ಎನ್ನುತ್ತಾರೆ. ವಿಮೆ ಕಂತು ಪಾವತಿಗೆ ಅಂತಿಮ ದಿನಾಂಕ ನಿಗದಿಪಡಿಸಿದಂತೆ, ವಿಮೆ ಮೊತ್ತ ಜಮೆಗೂ ನಿರ್ದಿಷ್ಟ ದಿನ ಗೊತ್ತುಪಡಿಸಬೇಕು. ವಿಮೆ ಕಂಪನಿಗಳ ಕಳ್ಳಾಟಕ್ಕೆ ಸರ್ಕಾರ ತಡೆ ಹಾಕಬೇಕು. ಶಾಸಕರು, ಸಂಸದರು ಈ ಕೂಡಲೇ ಗಮನಹರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
ಚನ್ನಪ್ಪ ಜಗದಪ್ಪನವರ, ರೈತ ಮುಖಂಡ, ಧಾರವಾಡ
ಗಾಳಿ ವೇಗದ ಕುರಿತಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ನೀಡಿರುವ ಮಾಹಿತಿಗೆ ವಿಮೆ ಕಂಪನಿ ತಕರಾರು ಮಾಡಿದೆ. ಜಿಲ್ಲೆಯ ಮಾವು ವಿಮೆ ಬಿಡುಗಡೆ ವಿಳಂಬದ ಕುರಿತು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ತಿಂಗಳ ಅಂತ್ಯದೊಳಗೆ ವಿಮೆ ಬಿಡುಗಡೆಯಾಗಲಿದೆ.
ಕಾಶಿನಾಥ ಭದ್ರಣ್ಣವರ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ.