crop insurance ಬೆಳೆ ವಿಮೆ ಹಣ ಬಿಡುಗಡೆಯಲ್ಲಿ ಅನ್ಯಾಯ

ಬೆಳೆ ವಿಮೆ ಹಣ crop insurance ಬಿಡುಗಡೆಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಖಂಡಿಸಿ ಭಾರತೀಯ ಕಿಸಾನ್ ಸಂಘಟನೆ, ವಿವಿಧ ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಬೆಳೆ ವಿಮೆ ಹಣ crop insurance ಬಿಡುಗಡೆಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಖಂಡಿಸಿ ಭಾರತೀಯ ಕಿಸಾನ್ ಸಂಘಟನೆ, ವಿವಿಧ ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
Published on
ಕಲಘಟಗಿ: ಬೆಳೆ ವಿಮೆ ಹಣ crop insurance ಬಿಡುಗಡೆಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಖಂಡಿಸಿ ಭಾರತೀಯ ಕಿಸಾನ್ ಸಂಘಟನೆ, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಗುರುವಾರದಿಂದ ಧರಣಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ಕಿಸಾನ್ ಸಂಘಟನೆ ಜಿಲ್ಲಾಧ್ಯಕ್ಷ ಗುರುನಾಥಗೌಡ್ರ ಬಸನಗೌಡ್ರ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಣ ಬಿಡುಗಡೆಯಲ್ಲಿ ಏಜೆಂಟರ ಹಾವಳಿಯಿಂದಾಗಿ ರೈತರಿಗೆ ಮೋಸವಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ವಿಮಾ ಕಂಪನಿಗಳಿಗೆ ರೈತರು ನೇರವಾಗಿ ವಿಮೆ ತುಂಬಿ ಅಧಿಕೃತ ರಸೀದಿ ಪಡೆಯುತ್ತ ಬಂದರೂ ರೈತರಿಗೆ ವಿಮೆ ಹಣ ಜಮೆಯಾಗುತ್ತಿಲ್ಲ. ಆದರೆ, ಏಜೆಂಟರ ಮೂಲಕ ತುಂಬಿದ ವಿಮೆಗೆ ಹಣ ಸಂದಾಯ ಆಗುತ್ತಿದೆ. ನೇರವಾಗಿ ವಿಮಾ ಕಂಪನಿಗಳಿಗೆ ರೈತರು ತುಂಬಿದ ವಿಮೆಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಬೆಳೆ ವಿಮೆ ಜಮೆ ಮಾಡುವಲ್ಲಿ ತಾಲೂಕಿನ ರೈತರಿಗೆ ಆಗಿರುವ ಅನ್ಯಾಯ ಸಹಿಸಲ್ಲ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಸಂಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಕೃಷಿ ಉಪ ನಿರ್ದೇಶಕ ನಟರಾಜ, ತಹಸೀಲ್ದಾರ್ ಬಸವರಾಜ ಹೊಂಕಣ್ಣದವರ, ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ, ಸಿಪಿಐ ಶ್ರೀಶೈಲ್ ಕೌಜಲಗಿ ಭೇಟಿ ನೀಡಿ 20 ದಿನಗಳ ಒಳಗಾಗಿ ಆಗಿರುವ ಲೋಪದೋಷಗಳ ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ರೈತರು ಧರಣಿ ಮುಂದುವರಿಸಿದರು.
ಪರಶುರಾಮ್ ಹುಲಿಹೊಂಡ, ಬಸವರಾಜ ತಿಪ್ಪಣ್ಣವರ, ಐ.ಸಿ. ಗೋಕುಲ, ಶಶಿಧರ ಹುಲಿಕಟ್ಟಿ, ಶಂಕರಗೌಡ ಪಾಟೀಲ, ಈಶ್ವರ ಜಾಯನಗೌಡ್ರ, ಫಕೀರೇಶ ನೇಸರೆಕರ, ಚಂದ್ರಗೌಡ ಪಾಟೀಲ, ಮಂಜುನಾಥ ಮಾಳಗಿ, ಕಲ್ಲಪ್ಪ ಪುಟ್ಟಪ್ಪನವರ, ನಾಗಪ್ಪ ಕನಕಪ್ಪನವರ, ನಾಗಣ್ಣ ಬೆಳ್ಳಿಗಟ್ಟಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net