ಧಾರವಾಡ: ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗಳನ್ನು ಪ್ರತಿವರ್ಷ ಒಂದೊಂದು ಪ್ರಕಾರಕ್ಕೆ ಕೊಡಮಾಡಲಾಗುತ್ತಿದ್ದು, 3 ವರ್ಷಗಳ ಪ್ರಶಸ್ತಿ ಘೋಷಿಸಲಾಗಿದೆ.
2022ನೇ ಸಾಲಿಗೆ ಜ್ಯೋತಿ ಗುರುಪ್ರಸಾದ್ ಅವರ ಕವನ ಸಂಕಲನ "ಜಟಾಯು ಪಕ್ಷಿಗೆ ಶ್ರದ್ಧಾಂಜಲಿ', 2023ನೇ ಸಾಲಿಗೆ ಅನುಪಮಾ ಪ್ರಸಾದ್ ಅವರ ಕಾದಂಬರಿ "ಪಕ್ಕಿ ಹಳ್ಳದ ಹಾದಿಗುಂಟ', 2024ನೇ ಸಾಲಿಗೆ ಉಷಾ ನರಸಿಂಹನ್ ಅವರ ಕಥಾಸಂಕಲನ "ಸರಸ್ವತಿ ಸಾಕ್ಷಿ' ಕೃತಿಗಳು ಆಯ್ಕೆಯಾಗಿವೆ.
ಪ್ರಶಸ್ತಿಯು 10,000 ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದೆ. ಮೇ 9ರಂದು ಸಂಜೆ 5ಕ್ಕೆ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮರಾಠಿಯ ಪ್ರಸಿದ್ಧ ಸಾಹಿತಿ ಸುನಂದಾ ಭೋಸೆಕರ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.