ರಾಜ್ಯದಲ್ಲಿ 581ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ. 2017ರಲ್ಲಿ ಆರಂಭವಾದ ಸಂದರ್ಭದಲ್ಲಿ ಕೇವಲ ಅನ್ನ-ಸಾಂಬಾರು, ಊಪಾಹಾರ ನೀಡಲಾಗುತ್ತಿತ್ತು. 2024ರ ಬಳಿಕ ಚಪಾತಿ, ರೊಟ್ಟಿ ಊಟದ ಮೆನು ಬಂದ ನಂತರ ಇಂದಿರಾ ಕ್ಯಾಂಟೀನ್ಗಳಲ್ಲಿ ಊಟ ಸೇವಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ, ಈಚೆಗೆ ವಾಣಿಜ್ಯ ಸಿಲಿಂಡರ್, ಅಕ್ಕಿ, ಇಡ್ಲಿ ರವೆ, ಉಪ್ಪಿಟ್ಟು ರವೆ, ಸಕ್ಕರೆ, ಅಡುಗೆ ಎಣ್ಣೆ, ಬೆಲ್ಲ, ತರಕಾರಿ ಸೇರಿ ಅನೇಕ ಸಾಮಗ್ರಿಗಳ ಬೆಲೆ ಹೆಚ್ಚಳವಾದ ಕಾರಣ ಟೆಂಡರ್ ಪಡೆದಿರುವ ಗುತ್ತಿಗೆದಾರರು ಗುಣಮಟ್ಟದ ಆಹಾರ ಪೂರೈಸಲು ಕಷ್ಟಪಡುತ್ತಿದ್ದಾರೆ.