ಹುಬ್ಬಳ್ಳಿ ಪ್ರಯಾಣಿಕರಿಗೂ ತಟ್ಟಿದ ಇಂಡಿಗೋ (IndiGo) ಬಿಸಿ

 ಹುಬ್ಬಳ್ಳಿ ವಿಮಾನ ನಿಲ್ದಾಣ ((IndiGo)
ಹುಬ್ಬಳ್ಳಿ ವಿಮಾನ ನಿಲ್ದಾಣ ((IndiGo)
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ವಿಮಾನ ರದ್ದು.
  • ಇನ್ನಿತರ ಫ್ಲೈಟ್​ಗಳ ಹಾರಾಟ ವಿಳಂಬ.
  • ಇಂಡಿಗೋ (IndiGo) ಏರ್​ಲೈನ್ಸ್ ಹೊರತುಪಡಿಸಿ, ಬೇರೆ ಏರ್​ಲೈನ್ಸ್​ಗಳ ವಿಮಾನಗಳ ಹಾರಾಟ ಇಲ್ಲ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ಎಲ್ಲ ವಿಮಾನಗಳು ಇಂಡಿಗೋ ಏರ್​ಲೈನ್ಸ್​ನದ್ದು. ಹೀಗಾಗಿ, ಕಳೆದ ಹಲವಾರು ದಿನಗಳಿಂದ ಇಂಡಿಗೋ ಏರ್​ಲೈನ್ಸ್​ನಲ್ಲಿ ನಡೆಯುತ್ತಿರುವ ಸಮಸ್ಯೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೂ ತಟ್ಟಿದೆ.
ಮುಂಬೈ, ಬೆಂಗಳೂರು, ಹೈದ್ರಾಬಾದ್, ದೆಹಲಿ, ಪುಣೆ ಮಹಾನಗರಗಳಿಂದ ನಿತ್ಯ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬಂದು ಹೋಗುತ್ತವೆ. ನಿತ್ಯ 1,200 ರಿಂದ 1,400 ಪ್ರಯಾಣಿಕರು ಇಲ್ಲಿಂದ ವಿವಿಧೆಡೆ ವಿಮಾನಗಳ ಮೂಲಕ ಸಂಚರಿಸುತ್ತಾರೆ.
ಇಂಡಿಗೋ ಏರ್​ಲೈನ್ಸ್ ಅನ್ನೇ ಅವಲಂಬಿಸಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ದೆಹಲಿಯಿಂದ ಹುಬ್ಬಳ್ಳಿಗೆ ಬಂದು ಹೋಗುವ ವಿಮಾನ ಕಳೆದ ಮೂರು ದಿನಗಳಿಂದ ಹಾರಾಟ ರದ್ದುಗೊಳಿಸಿದೆ. ಇನ್ನೂ, ಬೆಳಗ್ಗೆ 9 ಗಂಟೆಗೆ ಮುಂಬೈನಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಿಮಾನ 4 ತಾಸು ತಡವಾಗಿ ಬಂದಿದೆ.
ಮಧ್ಯಾಹ್ನ 1.05ಕ್ಕೆ ಬರಬೇಕಿದ್ದ ಹೈದ್ರಾಬಾದ್ ವಿಮಾನ ಎರಡು ತಾಸು ತಡವಾಗಿ ಹುಬ್ಬಳ್ಳಿಗೆ ಆಗಮಿಸಿದೆ. ಸಂಜೆ 4.35ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಬೇಕಿದ್ದ ವಿಮಾನ ರಾತ್ರಿ 8.30 ಆದರೂ ಬಂದಿರಲಿಲ್ಲ.
ಶನಿವಾರದಂದು ಪುಣೆ-ಹುಬ್ಬಳ್ಳಿ ಮಧ್ಯೆ ವಿಮಾನ ಹಾರಾಟ ಇರುವುದಿಲ್ಲ. ಹೀಗಾಗಿ, ಹುಬ್ಬಳ್ಳಿಯಿಂದ ಮುಂಬೈ, ಹೈದ್ರಾಬಾದ್, ಬೆಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಯುತ್ತ ಕುಳಿತಿದ್ದರು.
ಅಲ್ಲಿಂದ ಬರುವ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ನಿಲ್ದಾಣಕ್ಕೆ ಆಗಮಿಸಿದ್ದ ಸಂಬಂಧಿಕರು, ಸ್ನೇಹಿತರು ಸಹ ನಿಲ್ದಾಣದ ಆವರಣದಲ್ಲಿ ಕಾದು ಸುಸ್ತಾಗಿದ್ದರು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಂಡಿಗೋ ಏರ್​ಲೈನ್ಸ್ ಹೊರತುಪಡಿಸಿ, ಬೇರೆ ಏರ್​ಲೈನ್ಸ್​ಗಳ ವಿಮಾನಗಳ ಹಾರಾಟ ಇಲ್ಲ.
ಹೀಗಾಗಿ, ಇಂಡಿಗೋ ಏರ್​ಲೈನ್ಸ್ ಸಮಸ್ಯೆ ಬಗೆಹರಿಯುವವರೆಗೂ ಇಲ್ಲಿಂದ ಇತರ ಮಹಾನಗರಗಳಿಗೆ ತೆರಲು ವಿಮಾನ ಅವಲಂಬಿಸಿರುವ ಪ್ರಯಾಣಿಕರಿಗೆ ತೊಂದರೆ ತಪ್ಪಿದ್ದಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net