ಗೋ ಉತ್ಪನ್ನಗಳ ಬಳಕೆ ಹೆಚ್ಚಾಗಲಿ cow

cow ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮನೆ ಮನೆಗೆ ದೇಶಿ ಹಸುವಿನ ಹಾಲು, ಗೋಸೇವಾ ವಿಶಿಷ್ಟ ಯೋಜನೆಗೆ ಡಾ. ವಿ.ಎಸ್.ವಿ. ಪ್ರಸಾದ ಚಾಲನೆ ನೀಡಿದರು. ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದತ್ತಾತ್ರೇಯ ಭಟ್ಟ, ತೇಜಸ್ ಗೋಕಾಕ, ಇತರರಿದ್ದರು.
cow ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮನೆ ಮನೆಗೆ ದೇಶಿ ಹಸುವಿನ ಹಾಲು, ಗೋಸೇವಾ ವಿಶಿಷ್ಟ ಯೋಜನೆಗೆ ಡಾ. ವಿ.ಎಸ್.ವಿ. ಪ್ರಸಾದ ಚಾಲನೆ ನೀಡಿದರು. ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದತ್ತಾತ್ರೇಯ ಭಟ್ಟ, ತೇಜಸ್ ಗೋಕಾಕ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋ ಪ್ರೇಮಿಗಳ ಸಹಕಾರ ಅಗತ್ಯ.
  • ದೇಶಿ ಹಸುವಿನ ಹಾಲು ಜನರಿಗೆ ಲಭ್ಯ.
  • ಗೋಸೇವಾ ವಿಶಿಷ್ಟ ಯೋಜನೆ ಕಾರ್ಯಕ್ರಮ.
ಇಲ್ಲಿನ ಮಧುರಾ ಕಾಲನಿಯಲ್ಲಿ ಗುರುವಾರ ಗೋ ಸೇವಾ ಗತಿವಿಧಿಯ ಉತ್ತರ ಕರ್ನಾಟಕ ಪ್ರಾಂತ ಆಯೋಜಿಸಿದ್ದ ಮನೆ ಮನೆಗೆ ದೇಶಿ ಹಸುವಿನ ಹಾಲು, ಗೋಸೇವಾ ವಿಶಿಷ್ಟ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾಲಿನ ಉತ್ಪಾದನೆ ಹೆಚ್ಚಿಸಲು ಇನ್ನಷ್ಟು ಹಸುಗಳನ್ನು ಸಾಕುವ ಮೂಲಕ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸಲಾಗುವುದು. ಈ ಯೋಜನೆ ಸಂಪೂರ್ಣವಾಗಿ ಗೋ ಸಂರಕ್ಷಣೆಯ ದೃಷ್ಟಿಯಿಂದಲೇ ರೂಪಿತವಾಗಿದ್ದು, ವ್ಯಾಪಾರ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋ ಸೇವಾ ಗತಿವಿಧಿಯ ಉತ್ತರ ಕರ್ನಾಟಕ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ನಗರದೆಲ್ಲೆಡೆ ವಿಸ್ತರಿಸಲು ಗೋ ಪ್ರೇಮಿಗಳ ಸಹಕಾರ ಅಗತ್ಯ ಎಂದು ಹೇಳಿದರು.
ದುದಾರಾಮಜಿ ಚೌಧರಿ, ಬಾಬರಾವ್ ಘಂಟಸಾಲ ಹಾಗೂ ಹರಿಭಾಯಿ ಸುತಾರ ಉಪಸ್ಥಿತರಿದ್ದರು. ತೇಜಸ್ ಗೋಕಾಕ ಅಧ್ಯಕ್ಷತೆ ವಹಿಸಿದ್ದರು. ಗೋ ಸೇವಾ ಗತಿವಿಧಿಯ ಖಜಾಂಚಿ ಭರತ ಜೈನ್ ನಿರೂಪಿಸಿದರು. ಧಾರವಾಡ ವಿಭಾಗ ಸಂಯೋಜಕ ರಾಮ ಪಾರೀಕ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net