ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವಾರು ಪ್ರಚಾರಕರು ಕಾರ್ಯಾಲಯ ಮತ್ತು ವ್ಯವಸ್ಥೆಗಳು ಇಲ್ಲದೆ ಕೆಲಸ ಮಾಡಿದ್ದಾರೆ. ಧಾರವಾಡದಲ್ಲಿ ಸುಸಜ್ಜಿತ ಕಾರ್ಯಾಲಯ ನಿರ್ಮಾಣವಾಗಿದ್ದು, ಇದು ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡುವವರಿಗೆ ಶಕ್ತಿಕೇಂದ್ರವಾಗಲಿ. "ಶಿವಕೃಪಾ' ಕಾರ್ಯಾಲಯ ಸಂಘದ ಕಾರ್ಯಗಳ ಆಲಯವಾಗಲಿ ಎಂದು ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.