ಮಾಜಿ ಸೈನಿಕರ ಸಂದ ತಾಲೂಕು ಟಕ ಉದ್ಘಾಟನೆ 9ರಂದು

ನಿಂಗಪ್ಪ ಸಿಂಗೋಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿಂಗಪ್ಪ ಸಿಂಗೋಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಧಾರವಾಡ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದ ತಾಲೂಕು ಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ಆ. 9ರಂದು ಬೆಳಗ್ಗೆ 11 ಗಂಟೆಗೆ ಮಾಳಾಪುರದ ಪಠಾಣ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಜಿಲ್ಲಾಧ್ಯಕ್ಷ ನಿಂಗಪ್ಪ ಸಿಂಗೋಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿಯ ಮರಾಠಾ ಲು ಪದಾತಿ ದಳ (ಎಲ್​ಐಆರ್​ಸಿ) ಕಮಾಂಡಂಟ್​ ಬ್ರಿಗೇಡಿಯರ್​ ಗಿರೀಶ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸುವರು. ಉಪ್ಪಿನಬೆಟಗೇರಿ ವೀರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಯಾದವಾಡದ ಸಿದ್ದಾರೂಢ ಮಠದ ಆನಂದ ಗುರೂಜಿ, ಇನಾಮಹೊಂಗಲದ ಇಸ್ಲಾಂ ಧರ್ಮಗುರು ಜನಾಬ ಸೂಫಿ ಜಾರ ಸಾನ್ನಿಧ್ಯ ವಹಿಸುವರು. ಅಖಿಲ ಕರ್ನಾಟಕ ಮಾಜಿ ಸೈನಿಕ ಸಂದ ತಾಲೂಕು ಟಕದ ಅಧ್ಯಕಷ ಸಂಗಪ್ಪ ಬಡಗಡಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಈ ಮೊದಲು ಜಿಲ್ಲಾ ವ್ಯಾಪ್ತಿಗೆ ಸೀಮಿತಗೊಂಡ ಸಂವನ್ನು ಈಗ ತಾಲೂಕು ಮಟ್ಟಕ್ಕೆ ವಿಸ್ತರಿಸಲಾಗಿದೆ. ಈಗಾಗಲೇ ನವಲಗುಂದ, ಕುಂದಗೋಳ, ಅಣ್ಣಿಗೇರಿ ತಾಲೂಕು ಘಟಕಗಳು ಉದ್ಘಾನೆಗೊಂಡಿವೆ. ಇದೀಗ ಧಾರವಾಡ ತಾಲೂಕು ಟಕ ಉದ್ಘಾಟನೆಗೆ ಸಿದ್ಧಗೊಂಡಿದೆ. ಸದ್ಯ ಸಂದ 700 ಸದಸ್ಯರಿದ್ದಾರೆ. ಸರ್ಕಾರವು ಸಂಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂವು ಜನರಲ್ಲಿ ದೇಶಪ್ರೇಮ, ರಾಷ್ಟ್ರೀಯ ಭಾವನೆ ಮೂಡಿಸವುದು ಹಾಗೂ ಕಾಗಿರ್ಲ್​ ವಿಜಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಡಾ. ಬಿ.ಆರ್​. ಅಂಬೇಡ್ಕರ್​, ಮಹಾತ್ಮ ಗಾಂಧಿ, ವಿವೇಕಾನಂದ ಜಯಂತಿ ಸೇರಿ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಂಟಿಸುವ ಉದ್ದೇಶ ಹೊಂದಿದೆ ಎಂದರು.
ಮಾಜಿ ಸೈನಿಕರು, ವೀರನಾಯರು ಮತ್ತು ಅವರ ಅವಲಂಬಿತರ ಸಮಸ್ಯೆಗಳನ್ನು ಶಾಸನಬದ್ಧವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸುತ್ತೇವೆ. ಶಾಲೆ-&ಕಾಲೇಜುಗೆ ಭೇಟಿ ನೀಡಿ, ಯುವಜನರು ಸಶಸ್ತ್ರ ಪಡೆ ಸೇರಲು ಪ್ರೇರೇಪಿಸುವುದು ಮತ್ತು ರಕ್ಷಣಾ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಹಾಗೂ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ, ಯಾವುದೇ ಅನಾಹುತ ಅಥವಾ ತುರ್ತು ಸಂದರ್ಭಗಳಲ್ಲಿ ಸೈನಿಕರ ಏಕೀಕೃತ ತುಕಡಿಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಸೇವೆಗಾಗಿ ಮಾಜಿ ಸೈನಿಕರ ಸಂಟನೆ ಬಲಪಡಿಸುತ್ತೇವೆ ಎಂದು ತಿಳಿಸಿದರು.
ಸಂದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ನವಲಗುಂದ, ಧಾರವಾಡ ತಾಲೂಕು ಅಧ್ಯಕ್ಷ ಸಂಗಪ್ಪ ಬಡಗಡಿ, ಎ.ವಿ. ಮರಿಗೌಡರ, ಎ.ಸಿ.ಪರಡ್ಡಿ, ಬಸಪ್ಪ ಉದ್ದಮೇಶ, ಶೇಖರ ಹಂಪ್ಪಣವರ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net