ಹುಬ್ಬಳ್ಳಿ: ima cricket ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹುಬ್ಬಳ್ಳಿ ಹಾಗೂ ಕರ್ನಾಟಕ ಶಾಖೆ ಆಶ್ರಯದಲ್ಲಿ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಟೂರ್ನಾಮೆಂಟ್ "ಐಎಂಎ ಕೆಎಸ್ಬಿ ಡಾಕ್ಟರ್ಸ್ ಲೀಗ್ -2025' ಅನ್ನು ಡಿ. 12ರಿಂದ ಮೂರು ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಬಸವರಾಜ ಸಜ್ಜನ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಜಿಎ, ಬಿವಿಬಿ, ಕೆಎಂಸಿಆರ್ಐ, ಬಿಡಿಕೆ, ರೈಲ್ವೆ ಮೈದಾನಗಳು ಸೇರಿ ಅವಳಿನಗರದ ವಿವಿಧ ಮೈದಾನಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
ರಾಜ್ಯದ ವಿವಿಧ ಐಎಂಎ ಶಾಖೆಗಳ ಪರವಾಗಿ ಸುಮಾರು 600ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳುವರು. ಒಟ್ಟು 42 ತಂಡಗಳು ಮೂರು ವಿಭಾಗಗಳಲ್ಲಿ ಟೂನಿರ್ಯಲ್ಲಿ ಭಾಗವಹಿಸಲಿವೆ. ಓಪನ್ ವಿಭಾಗ, ಲೆಜೆಂಡ್ಸ್ ವಿಭಾಗ, ಮಹಿಳಾ ವಿಭಾಗದಲ್ಲಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಡಿ. 14ರಂದು ಫೈನಲ್ ಪಂದ್ಯಗಳು ನಡೆಯಲಿವೆ ಎಂದರು.
ವೈದ್ಯರಲ್ಲಿ ಒತ್ತಡ ನಿರ್ವಹಣೆ, ವೈದ್ಯ ಸಮುದಾಯದೊಳಗಿನ ಸ್ನೇಹಭಾವ, ತಂಡಭಾವ ಉತ್ತೇಜಿಸುವುದು, ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ಸಂಸ್ಥೆಯವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.