ಹುಬ್ಬಳ್ಳಿ& ಧಾರವಾಡ ಬೈಪಾಸ್ ಮೂಲಕ ಬೆಳಗಾವಿಯಿಂದ ಮೈಸೂರಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮಾಹಿತಿ ಅರಿತ ಬಜರಂಗ ದಳ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ಚಾಲಕನನ್ನು ವಿಚಾರಿಸಿದಾಗ ಗೋವುಗಳನ್ನು ಸಾಗಾಟ ಮಾಡಿಸುತ್ತಿದ್ದವನ ಮಾಹಿತಿ ನೀಡಿದ್ದ. ಬಜರಂಗ ದಳ ಮುಖಂಡ ಸಿದ್ದು ಹಿರೇಮಠ ಆತನಿಗೆ ಕರೆ ಮಾಡಿದಾಗ ಜೀವ ಬೆದರಿಕೆ ಹಾಕಿದ್ದಾನೆ. ಉಪನಗರ ಠಾಣೆ ಇನ್ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಭೇಟಿ ನೀಡಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಗೋವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.