ಧಾರವಾಡ: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25 ಸಾವಿರ ಲೀಟರ್ ಸ್ಪಿರಿಟ್ ಅನ್ನು ಗರಗ ಠಾಣೆ ಪೊಲೀಸರು ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಕೆಲ ದಿನಗಳಿಂದ ಅಕ್ರಮವಾಗಿ ಸ್ಪಿರಿಟ್ ಸಾಗಿಸಲಾಗುತ್ತಿತ್ತು. ಭಾನುವಾರ ರಾತ್ರಿ ಸ್ಪಿರಿಟ್ ಸಾಗಿಸುವ ವಿಷಯ ತಿಳಿದ ಗರಗ ಠಾಣೆಯ ಸಿಪಿಐ ಶಿವಯೋಗಿ ಲೋಹಾರ್ ತಂಡ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ಬೆಳಗ್ಗೆ ತೇಗೂರ ಬಳಿ 2 ಲಾರಿಗಳನ್ನು ತಡೆದು ಪರಿಶೀಲಿಸಿದಾಗ ಸ್ಪಿರಿಟ್ ಇರುವುದು ಪತ್ತೆಯಾಗಿದೆ. ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.