ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಿರ್ವಿುಸುತ್ತಿರುವ ಅಕ್ರಮ (illegal)ಮಸೀದಿ ವಿರುದ್ಧ ನೇಕಾರ ನಗರದಲ್ಲಿ ಹಿಂದುಪರ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿದರು.
ಅತಿವೃಷ್ಠಿಯಿಂದಾಗಿ ಮಳೆ ಕಳೆದುಕೊಂಡಿರುವ ಜನರಿಗೆ ಇದುವರೆಗೆ ಮನೆ ಕಟ್ಟಿಕೊಡದ ಸರ್ಕಾರ.
ನೇಕಾರ ನಗರ ಹಿತರಕ್ಷಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನೇಕಾರ ನಗರ ಸರ್ಕಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಅಕ್ರಮ ಮಸೀದಿ ನಿರ್ಮಾಣ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹನುಮಾನ ಚಾಲೀಸಾ ಓದಿದ ಹಿಂದುಗಳಿಂದ ಒಂದು ಲಕ್ಷ ರೂ. ಬಾಂಡ್ ಬರೆಯಿಸಿಕೊಂಡಿರುವ ಪೊಲೀಸರು, ಅಕ್ರಮ ಮಸೀದಿ ಕಟ್ಟುತ್ತಿರುವ ಜಾಗದಲ್ಲಿ ಮಹಾನಗರ ಪಾಲಿಕೆಯವರು ಅಂಟಿಸಿದ್ದ ನೋಟಿಸ್ ಹರಿದು ಹಾಕಿದವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ? ಎಂದು ಪ್ರಶ್ನಿಸಿದರು.
ನೇಕಾರ ನಗರದಲ್ಲಿ ಕೇವಲ 100 ಮೀಟರ್ಗಳ ಅಂತರದಲ್ಲಿ ಈಗಾಗಲೇ 4 ಮಸೀದಿಗಳಿವೆ. ಆದರೂ, ಅಕ್ರಮವಾಗಿ ಮತ್ತೊಂದು ಮಸೀದಿ ನಿರ್ವಣಕ್ಕೆ ಮುಂದಾಗಿದ್ದಾರೆ. ಹಿಂದುಗಳ ಹಬ್ಬಗಳಲ್ಲಿ ಆ ಪ್ರದೇಶದಲ್ಲಿ ಡಿಜೆ ಹಚ್ಚಬಾದು, ಪಟಾಕಿ ಸಿಡಿಸಬಾರದೆಂದು ಒತ್ತಾಯಿಸಿ, ಆ ಪ್ರದೇಶವನ್ನು ಸೂಕ್ಷ್ಮ ಪ್ರದೇಶವನ್ನಾಗಿ ಬದಲಾಯಿಸುತ್ತಾರೆ ಎಂದು ದೂರಿದರು.
ಎಸ್ಡಿಪಿಐ ಸಂಘಟನೆಯವರು ತಮ್ಮನ್ನು ಶಾಂತ ಮನಸ್ಕರೆಂದು ಕರೆದುಕೊಂಡಿರುವುದು ಹಾಸ್ಯಾಸ್ಪದ. ಶಾಂತಿ ಕದಡುವವರು ಯಾರೆಂದು ಇಡೀ ಜಗತ್ತಿಗೇ ಗೊತ್ತಿದೆ. ಹಿಂದುಗಳು ಅವರಿಂದ ಪಾಠ ಕಲಿತುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಅತಿವೃಷ್ಠಿಯಿಂದಾಗಿ ಮಳೆ ಕಳೆದುಕೊಂಡಿರುವ ಜನರಿಗೆ ಇದುವರೆಗೆ ಮನೆ ಕಟ್ಟಿಕೊಡದ ಸರ್ಕಾರ, ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದ ರೋಹಿಂಗ್ಯಾಗಳಿಗೆ ಮನೆ ಕಟ್ಟಿಕೊಡಲು ಮುಂದಾಗಿರುವುದು ಖಂಡನೀಯ ಎಂದರು.
ಮಂಜು ಕಾಟಕರ, ಮಂಜು ತೆರದಾಳ, ಶಿವಯ್ಯ ಹಿರೇಮಠ, ಅಣ್ಣಪ್ಪ ದಿವಟಗಿ, ಮಾಲತೇಶ ಉಮ್ಮನವರ, ಬಸು ದುರ್ಗದ, ಬಸು ಗೌಡರ, ನಾಗರಾಜ, ಪೂರ್ಣಿಮಾ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.