ಐಐಐಟಿ 8ನೇ ಘಟಿಕೋತ್ಸವ 30ರಂದು

ಡಾ. ಎಸ್​.ಆರ್​. ಮಹದೇವ ಪ್ರಸನ್ನ
ಡಾ. ಎಸ್​.ಆರ್​. ಮಹದೇವ ಪ್ರಸನ್ನ
Published on
ಧಾರವಾಡ: ಧಾರವಾಡದ ಭಾರತೀಯ ಮಾಹಿತಿ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) 8ನೇ ಘಟಿಕೋತ್ಸವವನ್ನು ಮೇ 30ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ. ಎಸ್​.ಆರ್​. ಮಹದೇವ ಪ್ರಸನ್ನ ಹೇಳಿದರು.
ಐಐಐಟಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಗನ್​ ಬ್ಯಾನಜಿರ್ ಘಟಿಕೋತ್ಸವ ಭಾಷಣ ಮಾಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಧಾರವಾಡ ಐಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಜಲಜ್​ ದಾನಿ ಅಧ್ಯಕ್ಷತೆ ವಹಿಸುವರು ಎಂದರು.
ಘಟಿಕೋತ್ಸವದಲ್ಲಿ ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ನಲ್ಲಿ 136, ಡಾಟಾ ಸೈನ್ಸ್​ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ 66 ಹಾಗೂ ಇಲೆಕ್ಟ್ರಾನಿಕ್​ ಆ್ಯಂಡ್​ ಕಮ್ಯುನಿಕೇಶನ್​ ವಿಭಾಗದಲ್ಲಿ 51, ಬಿ.ಟೆಕ್​ ಹಾಗೂ ಎಂ.ಟೆಕ್​ ಕೋಸ್​ಗಳಲ್ಲಿ ಒಟ್ಟು 253 ವಿದ್ಯಾಥಿರ್ಗಳು ಪದವಿ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿಗಳ ಹೆಸರಿನ ಚಿನ್ನದ ಪದಕ, ಪ್ರತಿ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ನಿರ್ದೇಶಕರ ಹೆಸರಿನ 6 ಆರು ಪದಕಗಳನ್ನು ನೀಡಲಾಗುವುದು ಎಂದರು.
ಐಐಐಟಿ ಕುಲಸಚಿವ ಪ್ರೊ. ಸತೀಶ ಅಣ್ಣಿಗೇರಿ, ವಿದ್ಯಾಥಿರ್ ಕಲ್ಯಾಣಾಧಿಕಾರಿ ಪ್ರೊ. ಕೆ. ಗೋಪಿನಾಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಪರ್ವತಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net