ಪೌರ ಕಾರ್ವಿುಕರಿರದ್ದರೆ ಅಯೋಮಯ ಸ್ಥಿತಿ chaotic

chaotic ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಪೌರ ಕಾರ್ವಿುಕರು ಹಾಗೂ ಹೆಸ್ಕಾಂ ಲೈನ್​ವುನ್​ಗಳ ಗೌರವ ಸಮರ್ಪಣಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಹಾಗೂ ಇತರರಿದ್ದರು.
chaotic ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಪೌರ ಕಾರ್ವಿುಕರು ಹಾಗೂ ಹೆಸ್ಕಾಂ ಲೈನ್​ವುನ್​ಗಳ ಗೌರವ ಸಮರ್ಪಣಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರವನ್ನು ಸ್ವಚ್ಛವಾಗಿಡಲು ಯತ್ನಿಸುತ್ತಿದ್ದೇನೆ
  • ಕ್ಷೇತ್ರದ ಜನರ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸುತ್ತಿದ್ದಾರೆ
  • ಆಟೋಟಿಪ್ಪರ್​ಗಳಲ್ಲಿಯೇ ನಾಗರಿಕರು ಕಸ ಹಾಕಬೇಕು.
ಹುಬ್ಬಳ್ಳಿ :
ಮಹೇಶ ಟೆಂಗಿನಕಾಯಿ ಅಭಿಮಾನಿ ಬಳಗ ಹಾಗೂ ರಾಜೇಶ್ವರಿ ಪ್ರಾಪರ್ಟಿಸ್ ವತಿಯಿಂದ ಆಯೋಜಿಸಿದ್ದ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪೌರ ಕಾರ್ವಿುಕರು ಹಾಗೂ ಹೆಸ್ಕಾಂ ಲೈನ್​ವುನ್​ಗಳ ಗೌರವ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನೆ ಎದುರು ಬರುವ ಕಸ ಸಂಗ್ರಹಿಸುವ ಆಟೋಟಿಪ್ಪರ್​ಗಳಲ್ಲಿಯೇ ನಾಗರಿಕರು ಕಸ ಹಾಕಬೇಕು. ಆ ಮೂಲಕ ಸ್ವಚ್ಛ ಹಾಗೂ ಸುಂದರ ನಗರ ನಿರ್ವಣಕ್ಕೆ ಸಹಕರಿಸಬೇಕು ಎಂದರು.
ಇತ್ತಿಚೆಗೆ ಧಾರಾಕಾರ ಮಳೆ ಹಾಗೂ ಗಾಳಿಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿ, ನಗರ ಕತ್ತಲೆಯಲ್ಲಿ ಮುಳುಗಿತ್ತು. ಆ ಸಮಯದಲ್ಲಿ ಹಗಲು-ರಾತ್ರಿ ಎನ್ನದೇ ಲೈನ್​ವುನ್​ಗಳು ಕೆಲಸ ಮಾಡಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ವಿುಕರ ಹಾಗೂ ಲೈನ್​ವುನ್​ಗಳ ಪಾದಪೂಜೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಮಹೇಶ ಟೆಂಗಿಕಾಯಿ, ಸೆಂಟ್ರಲ್ ಕ್ಷೇತ್ರದ ಪ್ರತಿ ವಾರ್ಡ್​ಗೆ ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿ, ಕ್ಷೇತ್ರವನ್ನು ಸ್ವಚ್ಛವಾಗಿಡಲು ಯತ್ನಿಸುತ್ತಿದ್ದೇನೆ ಎಂದರು.
ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಉತ್ತಮ ಕೆಲಸಗಾರರು. ಕ್ಷೇತ್ರದ ಜನರ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯರಾದ ಉಮೇಶ ಕೌಜಗೇರಿ, ಚಂದ್ರಿಕಾ ಮೇಸ್ತ್ರಿ, ರೂಪಾ ಶೆಟ್ಟಿ, ಪ್ರಮುಖರಾದ ಅಕ್ಕಮ್ಮ ಹೆಗಡೆ, ಪ್ರವೀಣ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net