ಪಾಲಿಕೆ ವಿಭಜನೆಗೊಂಡರೆ ವಿಶೇಷ ಅನುದಾನಕ್ಕೆ ಕೊಕ್ಕೆ grant

grant ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ.
grant ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ.
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡ ಪ್ರತ್ಯೇಕವಾಗುವುದು ಸದ್ಯಕ್ಕೆ ಬೇಡ.
  • ವಿಧಾನಸಭೆ ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿಕೆ.
  • ರಾಜ್ಯಪಾಲರಿಂದ ಇನ್ನೂ ಅಂಕಿತ ಬಿದ್ದಿಲ್ಲ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರ್ಕಾರ ಎಲ್ಲ ಮಹಾನಗರ ಪಾಲಿಕೆಗಳಿಗೆ 1 ಸಾವಿರ ಕೋಟಿ ರೂ. ಮತ್ತು ನಗರೋತ್ಥಾನ ಯೋಜನೆ ಅಡಿ ಎಲ್ಲ ನಗರಗಳಿಗೆ 100 ಕೋಟಿ ರೂ. ಅನುದಾನ ನೀಡಿತ್ತು.
ಆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಮಹಾನಗರಗಳಾದರೆ ಪ್ರತ್ಯೇಕ ಅನುದಾನ ಲಭಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಇದೇ ಕಾರಣಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬೆಂಬಲ ನೀಡಲಾಗಿತ್ತು ಎಂದರು.
ಇದೀಗ, 16ನೇ ಹಣಕಾಸು ಆಯೋಗದ ಅಡಿ 10 ಲಕ್ಷ ಜನಸಂಖ್ಯೆಗಿಂತ ಹೆಚ್ಚಿರುವ ಮಹಾನಗರಗಳಿಗೆ ಹೆಚ್ಚುವರಿ ವಿಶೇಷ ಅನುದಾನ ಲಭಿಸಲಿದೆ. 2011ನೇ ಜನಗಣತಿ ಪ್ರಕಾರ ಅವಳಿ ನಗರದ ಜನಸಂಖ್ಯೆ 11.80 ಲಕ್ಷ ಇದೆ.
ಹೀಗಾಗಿ, ಎರಡೂ ನಗರಗಳು ಪ್ರತ್ಯೇಕವಾಗುವುದು ಬೇಡ. ಈ ಕುರಿತು ತಾವು ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಪ್ರತ್ಯೇಕ ಮಹಾನಗರ ಪಾಲಿಕೆಗೆ ಹಸಿರು ನಿಶಾನೆ ತೋರಿಸಿದೆ. ಆದರೆ, ರಾಜ್ಯಪಾಲರಿಂದ ಇನ್ನೂ ಅಂಕಿತ ಬಿದ್ದಿಲ್ಲ. ಪಾಲಿಕೆಯನ್ನು ವಿಭಜಿಸದಂತೆ ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ, ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net