ಗಣತಿ ನಮೂನೆ ಮರಳಿಸದಿದ್ದರೆ ಕರಡು ಮತದಾರರ ಪಟ್ಟಿಯಿಂದ ಹೊರಕ್ಕೆ

ಸ್ನೇಹಲ್​ ಆರ್​.
ಸ್ನೇಹಲ್​ ಆರ್​.
Published on
ಧಾರವಾಡ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಜಿಲ್ಲೆಯಲ್ಲಿ ಗಣತಿ ನಮೂನೆಗಳನ್ನು ವಿತರಿಸಲಾಗುತ್ತಿದೆ. ವಿತರಣೆಯಾದ ನಮೂನೆಗಳಲ್ಲಿ ಮತದಾರರು ಬಿಎಲ್​ಒಗಳಿಗೆ ಹಿಂದಿರುಗಿಸದಿದ್ದರೆ ಅಂಥವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಪಟ್ಟಿಯ ಅರ್ಹತಾ ದಿನಾಂಕವನ್ನು ಅ. 1ಕ್ಕೆ ನಿಗದಿಪಡಿಸಲಾಗಿದೆ. ಜೂ. 20ರಿಂದ 29ರವರೆಗೆ ಮತದಾರರ ಪಟ್ಟಿ ತಯಾರಿ, ತರಬೇತಿ ಮತ್ತು ಮುದ್ರಣ ಕಾರ್ಯ ಕೈಗೊಳ್ಳಲಾಗುವುದು. ಬಿಎಲ್​ಒಗಳು ಜೂ. 30ರಿಂದ ಜು. 29ರವರೆಗೆ ಮನೆಗೆ ಭೇಟಿ ನೀಡುವರು. ಕರಡು ಮತದಾರರ ಪಟ್ಟಿಯನ್ನು ಆ. 5ರಂದು ಪ್ರಕಟಿಸಲಾಗುವುದು. ಆ. 5ರಿಂದ ಸೆ. 4ರವರೆಗೆ ಆೇಪಣೆ ಸಲ್ಲಿಸಬಹುದು. ಆ. 5ರಿಂದ ಅ. 3ರವರೆಗೆ ಆೇಪಣೆಗಳ ವಿಲೇವಾರಿ ಮಾಡಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅ. 7ರಂದು ಪ್ರಕಟಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 1,665 ಮತಗಟ್ಟೆಗಳಿದ್ದು, 1,665 ಬಿಎಲ್​ಒಗಳು ಮತ್ತು 230 ಬಿಎಲ್​ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಒಟ್ಟು 16,21,961 ಮತದಾರರಿದ್ದಾರೆ. ಅದರಲ್ಲಿ 15,19,544 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಶೇ. 93.69ರಷ್ಟು ವಿತರಿಸಲಾಗಿದೆ. 3,33,765 ಗಣತಿ ನಮೂನೆಗಳು ಗಣಕೀಕೃತಗೊಂಡಿವೆ. ಶೇ. 20.58ರಷ್ಟು ಗಣಕೀಕರಣಗೊಳಿಸಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಶೇ. 93.69ರಷ್ಟು ನಮೂನೆಗಳ ವಿತರಣೆ ಕಾರ್ಯ ರ್ಪೂಣಗೊಂಡಿದೆ. ಇನ್ನೂ ಶೇ. 6.31ರಷ್ಟು ನಮೂನೆಗಳ ವಿತರಣೆ ಬಾಕಿ ಇದೆ. ವಿತರಿಸಿದ ನಮೂನೆಗಳ ಪೈಕಿ ಶೇ. 20.58ರಷ್ಟು ನಮೂನೆಗಳು ಬಿಎಲ್​ಒ ಆ್ಯಪ್​ನಲ್ಲಿ ಗಣಕೀಕತ ಕಾರ್ಯ ರ್ಪೂಣಗೊಂಡಿದೆ. ಶೇ. 79.42ರಷ್ಟು ನಮೂನೆಗಳ ಗಣಕೀಕರಣ ಬಾಕಿ ಇದೆ ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೇಷನರಿ ಐಎಎಸ್​ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿ ಪ್ರಭಾವತಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net