(hypertention) ದಿನಕ್ಕೆ ಒಂದು ಚಮಚ ಉಪ್ಪು ಬಳಸಿ

ಲಖನೌದಲ್ಲಿ ಡಾ.ಜಿ.ಬಿ. ಸತ್ತೂರ (hypertention) ಮಾತನಾಡಿದರು.
ಲಖನೌದಲ್ಲಿ ಡಾ.ಜಿ.ಬಿ. ಸತ್ತೂರ (hypertention) ಮಾತನಾಡಿದರು.
Published on
ಹುಬ್ಬಳ್ಳಿ: ಅಂತಾರಾಷ್ಟ್ರೀಯ ರಕ್ತದೊತ್ತಡ ಸಂಸ್ಥೆ, ಏಷಿಯಾ ಫೆಸಿಫಿಕ್ ರಕ್ತದೊತ್ತಡ ಸಂಸ್ಥೆ, ಭರತೀಯ ರಕ್ತದೊತ್ತಡ ಸಂಸ್ಥೆಯ ಸಹಯೋಗದಲ್ಲಿ (hypertention) ಲಖನೌದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ವಾರ್ಷಿಕ ಸಮ್ಮೇಳನ ಏರ್ಪಾಟಾಗಿತ್ತು.
ಹುಬ್ಬಳ್ಳಿಯ ಖ್ಯಾತ ಹೃದ್ರೋಗ ಹಾಗೂ ಮಧುಮೇಹ ತಜ್ಞ, ಭಾರತೀಯ ರಕ್ತದೊತ್ತ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಜಿ.ಬಿ. ಸತ್ತೂರ ಮಾತನಾಡಿ, ವೈದ್ಯರು ತಮ್ಮ ಕೈಯಿಂದ ತಪಾಸಣೆ ಮಾಡುವ ರಕ್ತದೊತ್ತಡಕ್ಕೂ ಹೃದಯದಿಂದ ಹೊರಟ ದೊಡ್ಡ ರಕ್ತನಾಳದ (ಔರ್ಟಾ) ರಕ್ತದೊತ್ತಡಕ್ಕೂ ಇರುವ ವ್ಯತ್ಯಾಸವನ್ನು ವಿಶ್ಲೇಷಿಸಿದರು.
ಬಿಪಿಯನ್ನು 3 ಹಂತದಲ್ಲಿ ವಿಭಾಗಿಸಲಾಗಿದ್ದು, ನಿಯಂತ್ರಣ ಅಲಕ್ಷಿಸಿದಲ್ಲಿ ಮಿದುಳಿನ ರಕ್ತಸ್ರಾವ, ಪಾರ್ಶ್ವವಾಯು, ಹೃದಯಾಘಾತ ಆಗುವ ಸಾಧ್ಯತೆ ಇದೆ. ಬಿಪಿ ಇದ್ದವರು ಆಸ್ಪತ್ರೆಗೆ ಬಂದು 5-10 ನಿಮಿಷ ವಿಶ್ರಾಂತಿ ನಂತರ ಬಿಪಿ ಪರೀಕ್ಷಿಸಬೇಕು. ಮೊದಲನೇ ಬಾರಿ ಬಿಪಿ ಪರೀಕ್ಷಿಸುವಾಗ 2 ಕೈಗಳಲ್ಲಿಯೂ ಪರೀಕ್ಷಿಸಬೇಕು ಮತ್ತು ಡಿಜಿಟಲ್ ಬಿಪಿ ಉಪಕರಣವನ್ನು ಬಳಸಿ ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು.
ಭಾರತದಲ್ಲಿ ಪ್ರತಿಯೊಬ್ಬರೂ ದಿನಕ್ಕೆ ಒಂದು ಚಮಚ ಉಪ್ಪು (5 ಗ್ರಾಂ) ಬಳಸಬೇಕೆಂಬ ಸಲಹೆ ಇದೆ. ಆದರೂ ಹಲವು ರಾಜ್ಯಗಳಲ್ಲಿ 15-20 ಗ್ರಾಂ ಉಪ್ಪು ಬಳಸುತ್ತಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಇದು ಬಿಪಿ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಅದಂತೆಯೇ ದಿನಾಲೂ ಉಪ್ಪಿನಕಾಯಿ, ಹಪ್ಪಳ, ಮೇಲುಪ್ಪಿನ ಪ್ರಮಾಣವನ್ನು ತೀವ್ರತರವಾಗಿ ಕಡಿಮೆಗೊಳಿಸಬೇಕು ಎಂದು ಡಾ. ಸತ್ತೂರ ತಿಳಿವಳಿಕೆ ನೀಡಿದರು. ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 400ಕ್ಕೂ ತಜ್ಞರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net