ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ huvu balli mela ಹೂವು ಬಳ್ಳಿ ಮೇಳ ಕಾರ್ಯಕ್ರಮವನ್ನು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಉದ್ಘಾಟಿಸಿದರು.
Published on:
Copied
Follow Us
ಹುಬ್ಬಳ್ಳಿ: ಪ್ರತಿಯೊಂದು ಉದ್ಯಮದಲ್ಲಿ huvu balli mela ಒತ್ತಡ ಸಹಜ. ಆರಂಭದಲ್ಲಿ ನಾನು ಉದ್ಯಮ ಆರಂಭಿಸಿದಾಗ ವಾದ-ವಿವಾದಗಳು ಬಂದವು. ಇವುಗಳೆಲ್ಲವನ್ನೂ ಪರಿಚಯಿಸ್ಥರಿಂದ ಮಾಹಿತಿ ಪಡೆದು ಬಗೆಹರಿಸಿಕೊಂಡೆ ಎಂದು ಯಶಸ್ವಿ ಡೆವಲಪರ್ಸ್ ಮುಖ್ಯಸ್ಥ ಮೃತ್ಯುಂಜಯ ಮರೋಳ ಅಭಿಪ್ರಾಯಪಟ್ಟರು.
ಯಶಸ್ವಿ ಡೆವಲಪರ್ಸ್‌ನಿಂದ ಇಲ್ಲಿಯ ಗೋಕುಲ ರಸ್ತೆಯ ಗಾಂಧಿನಗರ ಕುಮಾರಪಾರ್ಕ್‌ನ ಯಶಸ್ವಿ ಎನ್‌ಕ್ಲೇವ್‌ನಲ್ಲಿ ಆಯೋಜಿಸಿರುವ ಹೂವು ಬಳ್ಳಿ ಮೇಳದ ಎರಡನೇ ದಿನವಾದ ಶನಿವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಲತಃ ನಮ್ಮ ಮನೆತನ ಬಸವ ತತ್ವ ಅನುಸರಿಸುತ್ತಿದೆ. ಭಕ್ತಿ, ಶ್ರದ್ಧೆಯ ಕಾಯಕ ನೆಚ್ಚಿಕೊಂಡಿದೆ. ಆದರೆ, ಉದ್ಯಮ ಆರಂಭಿಸಿದಾಗ ಕೆಲ ಅಡೆತಡೆಗಳು ಬಂದವು. ನಾನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರಿಂದ ನೋಡಿ, ತಿಳಿದು ಕಲಿಯುತ್ತಿದ್ದೇನೆ ಎಂದು ವಿವರಿಸಿದರು.