4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ರ್ಪೂಣಿಮಾ ಎನ್. ಪೈ ಅವರು ಪ್ರಕರಣದ ಕೂಲಂಕುಷ ವಿಚಾರಣೆ ನಡೆಸಿದ್ದರು. ಘಟನೆಯ ಕುರಿತು ಮೃತಳ ಅಪ್ರಾಪ್ತ ಮಗಳಾದ ಸೌಭಾಗ್ಯಾ ಬಳ್ಳೂರ ನ್ಯಾಯಾಲಯದಲ್ಲಿ ವಿವರ ಸಾಕ್ಷ$್ಯ ನುಡಿದಿದ್ದಳು. ತನಿಖಾಧಿಕಾರಿ ಪೂರಕ ಸಾಾಧಾರಗಳನ್ನು ಸಲ್ಲಿಸಿದ್ದರಿಂದ ಶಿವಾನಂದ ತಪ್ಪಿತಸ್ಥ ಎಂದು ಸಾಬೀತಾಗಿದೆ. ಆತನಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಮೃತಳ ಅಪ್ರಾಪ್ತ ಪುತ್ರ, ಪುತ್ರಿಗೆ ತಲಾ 1 ಲಕ್ಷ ರೂ. ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.