ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪತಿ

ಉದಯಕುಮಾರ ಹಾತರಕಿ
ಉದಯಕುಮಾರ ಹಾತರಕಿ
Published on
ಧಾರವಾಡ: ಧಾರವಾಡ- ಸವದತ್ತಿ ರಸ್ತೆಯ ಶ್ರೀ ದುರ್ಗಾದೇವಿ ದೇವಸ್ಥಾನದ ಹತ್ತಿರ ಫೆ. 26ರಂದು ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಗಂಡನೇ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಸಂಗತಿಯನ್ನು ಪೊಲೀಸರು ಭೇದಿಸಿದ್ದಾರೆ.
ಟನೆ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗುಂಜನ್​ ಆರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆ. 26ರಂದು ಬೆಳಗ್ಗೆ 11.50ರ ಸುಮಾರಿಗೆ ಸವದತ್ತಿ ಮುಖ್ಯ ರಸ್ತೆಪಕ್ಕ ಲಲಿತಾ ಹಾತರಕಿ ಎಂಬುವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು ಎನ್ನಲಾಗಿತ್ತು. ಈ ಸಂಬಂಧ ಮೃತಳ ತಂದೆ ನಿಂಗಪ್ಪ ನೀಲಣ್ಣವರ ದೂರು ನೀಡಿ ತನಿಖೆ ನಡಸುವಂತೆ ಆಗ್ರಹಿಸಿದ್ದರು. ಪ್ರಕರಣದ ತನಿಖೆಗೆ 5 ತಂಡಗಳನ್ನು ರಚಿಸಲಾಗಿತ್ತು. ವೈಜ್ಞಾನಿಕ ಸಾಾಧಾರ, ತಾಂತ್ರಿಕ ಸುಳಿವಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು.
* ಸಿನಿಮಾ ಶೈಲಿ​ ಸುಪಾರಿ ಕೊಲೆ: ಮೃತ ಲಲಿತಾಳ ವಿವಾಹ ತಾಲೂಕಿನ ನರೇಂದ್ರ ಗ್ರಾಮದ ಉದಯಕುಮಾರ ಹಾತರಕಿ ಎಂಬುವರೊಂದಿಗೆ ಆಗಿತ್ತು. ಕೆಲ ವರ್ಷಗಳಿಂದ ಬೇರ್ಪಟ್ಟು ಲಲಿತಾ ಸೋಮಾಪುರದ ತವರುಮನೆಯಲ್ಲಿದ್ದರು. ಈ ಮಧ್ಯೆ ಆರೋಪಿ ಉದಯಕುಮಾರ ಮತ್ತೊಂದು ಮದುವೆಯಾಗಿದ್ದ. ಜಮೀನಿನ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಲೋಕ ಅದಾಲತ್​ನಲ್ಲಿ ಲಲಿತಾಗೆ ಜೀವನಾಂಶವಾಗಿ 1.5 ಎಕರೆ ಜಮೀನು ನೀಡಬೇಕು ಎಂದು ಆದೇಶವಾಗಿತ್ತು. ಆದರೆ, ಇದಕ್ಕೆ ಒಪ್ಪದ ಉದಯಕುಮಾರ, ಫೆ. 25ರಂದು ಪತ್ನಿಗೆ ಕರೆ ಮಾಡಿ ಮಾತನಾಡಲು ಕರೆದಿದ್ದ. ಅದರಂತೆ ದುರ್ಗಾದೇವಿ ಗುಡಿಯ ಹತ್ತಿರ ಬಂದಿದ್ದ ಲಲಿತಾಳಗೆ ಗೆಳೆಯರ ಥಾರ್​ನಿಂದ ಡಿಕ್ಕಿಪಡಿಸಿ ಕೊಲೆ ಮಾಡಿಸಿದ್ದ ಎಂದು ಎಸ್​ಪಿ ಗುಂಜನ್​ ತಿಳಿಸಿದರು.
* ಅಪಘಾತಕ್ಕೆ ಥಾರ್​ ಬಳಸಿದ್ದ ಆರೋಪಿಗಳು:
ತಾಲೂಕಿನ ಕರಡಿಗುಡ್ಡ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಸಾರಿಗೆ ಬಸ್​ನ ಡ್ಯಾಶ್​ ಕ್ಯಾಮ್​ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿತ್ತು. ಎದುರಿಗೆ ವಾಹನಗಳು ಇಲ್ಲದಿದ್ದರೂ ಥಾರ್​ ರಸ್ತೆಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿರುವುದು ಶಂಕಾಸ್ಪದವಾಗಿತ್ತು. ನಂಬರ್​ಪ್ಲೇಟ್​ ಇಲ್ಲದ ಥಾರ್​ ಜೀಪನ್ನು ತಾಂತ್ರಿಕ ಸಾಾಧಾರಗಳ ಮೂಲಕ ಪತ್ತೆ ಮಾಡಲಾಗಿದೆ. ಈ ಸಂಬಂದ ಮೃತಳ ಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪತ್ನಿಯ ಕೊಲೆಗೆ 40 ಲಕ್ಷ ರೂಪಾಯಿ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.
ಈ ಸಂಬಂಧ ಮೃತಳ ಪತಿ, ನರೇಂದ್ರ ಗ್ರಾಮದ ಉದಯಕುಮಾರ ಹಾತರಕಿ, ಗರಗ ಗ್ರಾಮದ ನಾಗಪ್ಪ ಪಡೇಕರ, ಕಿತ್ತೂರ ತಾಲೂಕಿನ ನಿಚ್ಚಣಕಿಯ ಅಭಿಷೇಕ ವರಗನ್ನವರ ಹಾಗೂ ಸವದತ್ತಿ ತಾಲೂಕು ದೊಡವಾಡದ ನಾಗರಾಜ ಉಪ್ಪಿನ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಥಾರ್​ ಜೀಪ್​, 4 ಮೊಬೈಲ್​, 20 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net