kidney treat ಮೂತ್ರಪಿಂಡ ಶಸ್ತ್ರ ಚಿಕಿತ್ಸೆಯಲ್ಲಿ ಶತಕದ ಮೈಲಿಗಲ್ಲು
kidney treat ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ ಡಾ. ವೆಂಕಟೇಶ ಮೊಗೇರ, ಡಾ. ಭರತ ಕ್ಷತ್ರಿ, ಡಾ. ಭೂಷಣ ಗ್ರಾಮೋಪಾಧ್ಯ, ಡಾ. ಶ್ರೀನಿವಾಸ ಹರಪನಹಳ್ಳಿ ಇತರರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತತ್ವದರ್ಶ ಆಸ್ಪತ್ರೆಯ ಸಾಧನೆ
ಹುಬ್ಬಳ್ಳಿ: kidney treat ಇಲ್ಲಿಯ ತತ್ವದರ್ಶ ಆಸ್ಪತ್ರೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಮೂತ್ರಪಿಂಡ (ಕಿಡ್ನಿ) ಶಸ್ತ್ರ ಚಿಕಿತ್ಸೆಯಲ್ಲಿ ಶತಕದ ಮೈಲಿಗಲ್ಲು ದಾಟಿದ್ದು, ಆ ಕುಟುಂಬಗಳಲ್ಲಿ ನೆಮ್ಮದಿ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೂತ್ರಪಿಂಡ ಕಸಿ ತಜ್ಞ ಡಾ. ವೆಂಕಟೇಶ ಮೊಗೇರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀರ್ಘ ಕಾಲಿನ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಇಂತಹ ಶಸ್ತ್ರಚಿಕಿತ್ಸೆಯು ವರದಾನ, ಡಯಾಲಿಸಿಸ್ ಚಿಕಿತ್ಸೆಯಿಂದ ಕೇವಲ ಉಪಚರಿಸಬಹುದು. ಆದರೆ, ಮೂತ್ರಪಿಂಡ ಕಸಿ ಮಾಡಿಸಿಕೊಂಡು ಸಾಮಾನ್ಯ ಜೀವನ ನಡೆಸಬಹುದು ಎಂದರು.
ಪ್ರತಿ ವರ್ಷ ತತ್ವದರ್ಶ ಆಸ್ಪತ್ರೆಯಲ್ಲಿ 12ರಿಂದ 15 ಮೂತ್ರಪಿಂಡ ಕಸಿ ಮಾಡಲಾಗುತ್ತದೆ. ಕಳೆದ ಡಿಸೆಂಬರ್ 23ಕ್ಕೆ 103ನೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇವರಲ್ಲಿ ಬಹುತೇಕರು ಹತ್ತಿರದ ಸಂಬಂಧಿಕರೇ ಮೂತ್ರಪಿಂಡ ದಾನ ಮಾಡಿದ್ದರಿಂದ ಕಸಿ ಪ್ರಕ್ರಿಯೆ ಸುಲಭವಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 4 ಸಾವಿರ ಜನರಿಗೆ ಮೂತ್ರಪಿಂಡದ ಅವಶ್ಯಕತೆ ಇರುವ ರೋಗಿಗಳು ಇದ್ದಾರೆ. ಅವರೆಲ್ಲ ಕಿಡ್ನಿಗಾಗಿ ಕಾಯುತ್ತಿದ್ದಾರೆ. ದಾನಿಗಳು, ಯಾರಾದರೂ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡವರು ಲಭ್ಯವಾದರೆ ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ಅಗತ್ಯ ಇರುವವರಿಗೆ ಅಳವಡಿಸಲಾಗುತ್ತದೆ. ಹಾಗಾಗಿಯೇ ಕಾಯುವವರ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆ ಎಂದರು.
ಅಂಗಾಂಗ ದಾನದ ಬಗ್ಗೆ ಭಾರತದಲ್ಲಿ ಜಾಗೃತಿ ಕಡಿಮೆ ಇದೆ. ಹಾಗಾಗಿ ನಿಧನ ಅಥವಾ ಅಪಘಾತದಲ್ಲಿ ಮರಣ ಹೊಂದಿದವರ ದೇಹವನ್ನು ಮಣ್ಣು ಮಾಡುತ್ತಾರೆ, ಇಲ್ಲವೇ ಸುಟ್ಟು ಹಾಕುತ್ತಾರೆ ಎಂದು ವಿಷಾದಿಸಿದರು.
ರಾಜ್ಯ ಸರ್ಕಾರದ ಜೀವ ಸಾರ್ಥಕತೆ ಯೋಜನೆಯಡಿ ಯಾರಾದರೂ ಅಂಗಾಂಗ ದಾನ ಮಾಡಬಹುದು. ಸಾವಿನ ನಂತರವೂ ಸಮಾಜ ಸೇವೆ ಮಾಡಲು ಸಾಧ್ಯವಿರುವುದು ಅಂಗಾಂಗ ದಾನದಿಂದ ಮಾತ್ರ ಎಂದು ಹೇಳಿದರು.
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ಡಾ. ಭರತ ಕ್ಷತ್ರಿ ಮಾತನಾಡಿ, ಶ್ರೇಷ್ಠ ದಾನ ಎಂದರೆ ಅದು ಅಂಗಾಂಗ ದಾನ. ತತ್ವದರ್ಶ ಆಸ್ಪತ್ರೆಯಲ್ಲಿ ಹೀಗೆ ದಾನ ಮಾಡಿದವರಿಂದ ಪಡೆದು ಅನೇಕ ಜನರು ಮರುಜೀವ ಪಡೆದಿದ್ದಾರೆ. ಇದೊಂದು ಮೈಲಿಗಲ್ಲು ಎಂದರು.