(hukkerimath) ನಾಡು ಬೆಳಗುವ ಜೀವಂತ ಜ್ಯೋತಿ

ಸಪ್ತಸಾಗರದಿಂದ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಮಂಗಳವಾರ ಆಗಮಿಸಿದ್ದ ಜ್ಯೋತಿ ಯಾತ್ರೆಯನ್ನು (hukkerimath) ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸ್ವಾಗತಿಸಿ ಬೀಳ್ಕೊಟ್ಟರು.
ಸಪ್ತಸಾಗರದಿಂದ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಮಂಗಳವಾರ ಆಗಮಿಸಿದ್ದ ಜ್ಯೋತಿ ಯಾತ್ರೆಯನ್ನು (hukkerimath) ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸ್ವಾಗತಿಸಿ ಬೀಳ್ಕೊಟ್ಟರು.
Published on
ಹುಬ್ಬಳ್ಳಿ: ಹಾವೇರಿ ಹುಕ್ಕೇರಿಮಠದ (hukkerimath) ಜಾತ್ರಾ ಮಹೋತ್ಸವ ನಿಮಿತ್ತ ಸಪ್ತಸಾಗರದಿಂದ ಆಗಮಿಸಿದ್ದ ಜ್ಯೋತಿ ಯಾತ್ರೆಯು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಮಂಗಳವಾರ ಆಗಮಿಸಿತು.
ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿ ಮೂರ್ತಿಗಳನ್ನು ಕರೆ ತರಲಾಗಿದೆ. ಶಿವಯೋಗ ಮಂದಿರ ಶ್ರೀ ಸುಕುಮಾರ ಜ್ಯೋತಿ, ಸಪ್ತಸಾಗರದ ಶ್ರೀ ಶಿವಬಸವ ಜ್ಯೋತಿ ಹಾಗೂ ಮೂರುಸಾವಿರ ಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಜ್ಯೋತಿ ರಥ ಯಾತ್ರೆಯನ್ನು ಹುಕ್ಕೇರಿ ಮಠಕ್ಕೆ ಕೊಂಡೊಯ್ಯಲಾಗುತ್ತಿದೆ. ಇದು ನಾಡಿನ ಹೆಮ್ಮೆಯ ವಿಷಯ. ಈ ಜೀವಂತ ಜ್ಯೋತಿಗಳು ನಾಡು ಬೆಳಗಲಿ ಎಂದು ಹಾರೈಸಿದರು.
ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, 111 ಕಾರ್‌ಗಳ ಮೂಲಕ ರ‌್ಯಾಲಿ ಬಂದಿದೆ. ಪವಿತ್ರ ಜ್ಯೋತಿ ಯಾತ್ರೆಯು ಇಲ್ಲಿಂದ ಹಾವೇರಿ ಹುಕ್ಕೇರಿ ಮಠಕ್ಕೆ ತೆರಳಲಿದೆ ಎಂದರು.
ರ‌್ಯಾಲಿಯ ಮೂರುಸಾವಿರ ಮಠದಿಂದ ಆರಂಭಗೊಂಡು ನೆಹರು ಮೈದಾನ, ಕಿತ್ತೂರ ಚನ್ನಮ್ಮ ವೃತ್ತ, ಬಂಕಾಪುರ ಚೌಕ್, ವರೂರು, ಪಿ.ಬಿ. ರಸ್ತೆ ಮೂಲಕ ತೆರಳಿತು.
ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಕೂಡಲದ ಶ್ರೀ ಗುರು ಮಹೇಶ್ವರ ಸ್ವಾಮೀಜಿ, ಶೇಗುಣಸಿಯ ಶ್ರೀ ಮಹಾಂತ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಹೊಳಲದ ಶ್ರೀ ಚನ್ನಬಸವ ದೇವರು, ಶಿರಾಳಕೊಪ್ಪದ ಶ್ರೀ ಶಿವಬಸವ ದೇವರು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಮುಖಂಡರು ಭಾಗವಹಿಸಿದ್ದರು.
ಡಿ. 25ರಿಂದ 29ರವರೆಗೆ ಹಾವೇರಿ ಹುಕ್ಕೇರಿ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net