ranaji ಆತಿಥೇಯ ಕರ್ನಾಟಕಕ್ಕೆ ಭರ್ಜರಿ ಜಯ

ಆತಿಥೇಯ ಕರ್ನಾಟಕ, ಚಂಡೀಗಢ ವಿರುದ್ಧ ಭರ್ಜರಿ (ranaji) ಜಯ
ಆತಿಥೇಯ ಕರ್ನಾಟಕ, ಚಂಡೀಗಢ ವಿರುದ್ಧ ಭರ್ಜರಿ (ranaji) ಜಯ
Published on
ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ 5ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಚಂಡೀಗಢ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಎದುರಾಳಿ ತಂಡವನ್ನು ಇನ್ನಿಂಗ್ಸ್ ಹಾಗೂ 185 ರನ್‌ಗಳ ಅಂತರದಿಂದ ಸೋಲಿಸಿ ಆತಿಥೇಯರು 7 ಅಂಕಗಳನ್ನು ಸಂಪಾದಿಸಿದ್ದಾರೆ. ಪಂದ್ಯದ 3ನೇ ದಿನವಾದ ಮಂಗಳವಾರ 16 ವಿಕೆಟ್‌ಗಳು ಪತನವಾದವು.
ಸ್ನಿನ್ನರ್‌ಗಳಾದ ಶ್ರೇಯಸ್ ಗೋಪಾಲ ಹಾಗೂ ಶಿಖರ ಶೆಟ್ಟಿ 15 ವಿಕೆಟ್‌ಗಳನ್ನು ಪಡೆದು ಹಾಲಿ ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ತವರಿನಲ್ಲಿ ಮೊದಲ ಜಯ ಒದಗಿಸಿದರು.
ಕರ್ನಾಟಕ ಪ್ರಥಮ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 547 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಚಂಡೀಗಢ ಪ್ರಥಮ ಇನ್ನಿಂಗ್ಸ್‌ನಲ್ಲಿ 222 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 140 ಗಳಿಸಿ ಸುಲಭ ತುತ್ತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net