hubli wakathon ಯುವ ಸಮೂಹ ಆರೋಗ್ಯದತ್ತ ದೃಷ್ಟಿ ಹರಿಸಲಿ

ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ hubli wakathon‘ನಶಾಮುಕ್ತ ಭಾರತ ಯುವ ಶುದ್ಧಿ ಅಭಿಯಾನ ವಾಕಥಾನ್ ಮತ್ತು ಬೈಕ್ ರ‌್ಯಾಲಿಗೆ ಮೇಯರ್ ದುರ್ಗಮ್ಮ ಬಿಜವಾಡ ಚಾಲನೆ ನೀಡಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ hubli wakathon‘ನಶಾಮುಕ್ತ ಭಾರತ ಯುವ ಶುದ್ಧಿ ಅಭಿಯಾನ ವಾಕಥಾನ್ ಮತ್ತು ಬೈಕ್ ರ‌್ಯಾಲಿಗೆ ಮೇಯರ್ ದುರ್ಗಮ್ಮ ಬಿಜವಾಡ ಚಾಲನೆ ನೀಡಿದರು.
Published on

ಹುಬ್ಬಳ್ಳಿ:

ರೋಗ್ಯ ಹಾಳು ಮಾಡಿಕೊಂಡರೆ

hubli wakathon

ನಮಗೆ ಮತ್ತೇನೂ ಸಿಗುವುದಿಲ್ಲ. ಯುವ ಸಮೂಹ ಆರೋಗ್ಯದತ್ತ ಲಕ್ಷೃವಹಿಸಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಇಲ್ಲಿಯ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ನಶಾಮುಕ್ತ ಭಾರತ ಯುವ ಶುದ್ಧಿ ಅಭಿಯಾನ ವಾಕಥಾನ್ ಮತ್ತು ಬೈಕ್ ರ‌್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮೂಹ ದುಶ್ಚಟಕ್ಕೆ ಬಲಿಯಾಗುತ್ತಿದೆ. ಹಿಂದೆ ಮಕ್ಕಳು, ತಂದೆ-ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ಮಕ್ಕಳನ್ನೇ ತಂದೆ-ತಾಯಿ ಕರೆದುಕೊಂಡು ಬರುವ ಪರಿಸ್ಥಿತಿ ನೀಡಿ ದುಃಖವಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರೀ ಘೋಷಣೆ ಕೂಗಿ, ಬೈಕ್ ರ‌್ಯಾಲಿ ಮಾಡಿದರೆ ಸಾಲದು. ಜೀವನದಲ್ಲಿ ದುಶ್ಚಟಕ್ಕೆ ಬಲಿಯಾಗುವುದಿಲ್ಲ ಎಂಬ ಸಂಕಲ್ಪ ತೊಡಬೇಕು ಎಂದು ತಿಳಿವಳಿಕೆ ಮೂಡಿಸಿದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಯುವ ಸಮುದಾಯ ಶೋಕಿಗೆ, ಮಜಾ ಮಾಡಲು ಹೋಗಿ ದುಶ್ಚಟಕ್ಕೆ ಬಲಿಯಾಗಬಾರದು ಎಂದರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ. ಭಗವಾನ ಬಿ.ಸಿ. ಪ್ರಾಸ್ತಾವಿಕ ಮಾತನಾಡಿ, ಈಗಾಗಲೇ 16 ಜಿಲ್ಲೆಗಳಲ್ಲಿ ನಮ್ಮ ವಿವಿಯು ಈ ರೀತಿಯ ಅಭಿಯಾನ ನಡೆಸಿದೆ. ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ಮಿತ್ರ ಮತ್ತು ಆರೋಗ್ಯ ರಕ್ಷಣಾ ವೃತಿ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದ ಇನ್‌ಸ್ಪೆಕ್ಟರ್ ಅಕ್ಷತಾ ಎಫ್.ಕೆ., ದಿಶಾಬೋಧ ಫೌಂಡೇಷನ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ಡಾ. ಸತೀಶ ಇರಕಲ್ ಮಾತನಾಡಿದರು.
ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಪ್ರೊ.ಎಸ್.ವಿ. ಸಂಕನೂರ, ಉದ್ಯಮಿಗಳಾದ ಡಾ.ವಿ.ಎಸ್.ವಿ. ಪ್ರಸಾದ, ಗೋವಿಂದ ಜೋಶಿ, ಶ್ರೀ ಬಸವಲಿಂಗ ಸ್ವಾಮೀಜಿ, ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್ ಈರೇಶ ಅಂಚಟಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net