ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತಿ ರಾಜಗುರು ಅವರನ್ನು ಬೆಳಗ್ಗೆ 9ಕ್ಕೆ ಅಲಂಕೃತ ವಾಹನದಲ್ಲಿ ಶ್ರೀ ಸಿದ್ಧಾರೂಢ ಮಠ ಮಹಾದ್ವಾರದಿಂದ ಮೆರವಣಿಗೆ ಮೂಲಕ ಕರೆತರಲಾಗುವುದು. ಡೊಳ್ಳು, ಜಾಂಜ್ಮೇಳ, ಕರಡಿಮಜಲು, ಜಗ್ಗಲಗಿ ಮೇಳ, ಹೆಜ್ಜೆ ಮೇಳ ಸೇರಿ 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ.